ಅಂದೊಮ್ಮೆ
ಪೋಲಿಸರು ಬಂದು
ಮನೆಯ ಬಾಗಿಲು ತಟ್ಟಿದಾಗ
ಬೆಚ್ಚಿ ಬಿದ್ದೆ ನಾ,
ಪೋಲಿಸರಿಂದಲ್ಲ
ಅಕ್ಕಪಕ್ಕದ ಜೋಡಿ ಜೋಡಿ ಕಣ್ಣುಗಳು ಇಣುಕಿದಾಗ
"ಈಗಲೇ ಬರಬೇಕಂತೆ"
ಸಿಡಿಯಿತೊಂದು ಗುಂಡು
ಅಕ್ಕಪಕ್ಕದವರ ಮುಂದೆ
ಆಯಿತು ನನ್ನ ಮಾನ ತುಂಡು

ವಿಧಿಯಿಲ್ಲದೆ ನಡೆದೆ
ಪೋಲಿಸರು ನನ್ನ ಮುಂದೆ
ಕಣ್ಣುಗಳ ಜೋಡಿ ಬೆನ್ನ ಹಿಂದೆ

ಹೋದೆ ನಾನು ಸ್ಟೇಷನ್ಗೆ,
ಮನಸ್ಸು ಮುದುಡಿಸಿಕೊಂಡು
ಕುಳಿತಿದ್ದ ಇನ್ಸ್ ಪೆಕ್ಟರು
ಮುಖ ಬಾಡಿಸಿಕೊಂಡು

ನೋಡುತ್ತಲೇ ನನ್ನನ್ನು ಸಿಡಿದೆದ್ದ
ಇದೇನಿದು ಎಂದು ಉರಿದುಬಿದ್ದ

ಆದರೆ, ಆದರೆ,
ನಿಜವಾಗಲು ವಿಷಯದ ಅರಿವಾಗಲಿಲ್ಲ ನನಗೆ

ನಂತರ ಮೆಲ್ಲನೆ ನುಡಿದ
"ನಿಮ್ಮವರ ಮೋಡಿ ಬರಹ,
ಅಷ್ಟೋಂದು ಸುಂದರ,
ನಿಮ್ಮವರು ಕೊಟ್ಟಿದ್ದ ಕಂಪ್ಲೇಂಟು
ಅರ್ಥವಾಗಲಿಲ್ಲ.
ಗತ್ಯಂತರವಿಲ್ಲ
ನಿಮ್ಮನ್ನು ಕರೆಸಬೇಕಾಯಿತು
ದಯವಿಟ್ಟು
ಓದಿಹೇಳಿ!!!!!!!!"