"ಪ್ರೇಮಾಂತರಂಗ"

ನೀ ಅರಿಯಲಾರದೇ ಹೋದೆ,

ನಾ ನಿಂತು ನಿಂತಲ್ಲೇ ನಿನ್ನ ನೋಡುತ್ತಾ ನಿಂತಿದ್ದು,

ನನ್ನ ಕಣ್ಣಿನ ಧೃಷ್ಟಿ ಖಣಜದ ಕಣ ಕಣಗಳಲ್ಲೂ,

ನಿನ್ನ ಭಾವ ಚಿತ್ರವ ಬರೆದಿಟ್ಟಿದ್ದೂ,

ನನ್ನ ಸ್ಮೃತಿಪಟಲದ ಪದರ ಪದರಗಳಲ್ಲೂ,

ನಿನ್ನ ಪ್ರತಿಬಿಂಭವ ಪಸರಿಸಿದ್ದೂ,

ನನ್ನ, ಕಡೆಗೊಂದು ಸಲ ತಿರುಗಿ ನೋಡುವೆಯೆಂದು,

ಕಲ್ಲಾಗುವರೆಗೂ ಕಾದಿದ್ದು.

ನಾ ಮರೆಯಲಾರದೆ ಹೋದೆ,

ನಿನ್ನ ಮರುಕದ ಮುಖದ ಮೇಲಿದ್ದ ಮಾರಕ ನಗು.

ನನ್ನ ಕಣ್ಣುಗಳು ಕೇಳುತ್ತಾ(ಅರಸುತ್ತಾ) ಕೊರಗಿದವು,

ನಿನ್ನ ಹೊಳಪು ಕಣ್ಣುಗಳ "ಹಸಿರಾದ ಹುರುಪು".

ನನ್ನ ಮನ ಕಾಯುತ್ತಿತ್ತು,

ಕುಡಿ ಸ್ನೇಹ ಚಿಗುರೊಡೆಯಲೆಂದು,

ನಿನ್ನ ಹುಡುಕಿ ಹುಡುಕಿ ತಡಕಾಡಿತು.