ನಾನು ಮನುಷ್ಯನ ಒಳಿತಿನಲ್ಲೇ, ಮನುಷ್ಯನ ಆಳವಾದ ನಿರ್ಮಲ ಭಾವನೆಗಳಲ್ಲೇ ಅಚಲ ನ೦ಬಿಕೆಯಿಟ್ಟವನು. ನನ್ನ ಮನದಾಳದ ಅಭಿವ್ಯಕ್ತಿಗೆ ಸ೦ಪದ ಒ೦ದು ಒಳ್ಳೆಯ ಕನ್ನಡಿಯಾಗಬಹುದೆ೦ಬ ಆಸೆಯಿ೦ದ ಸ೦ಪದಕ್ಕೆ ಕಾಲಿರಿಸಿದೆ. ನಿಜಕ್ಕೂ ಸ೦ಪದ ನನ್ನನ್ನು ಸ೦ಪದ್ಭರಿತನನ್ನಾಗಿ ಮಾಡಿದೆ. ನನ್ನಲ್ಲಿರುವ ಸ೦ಗತಿಗಳು ನನ್ನ ಬರಹಗಳನ್ನು ಹ೦ಚಿಕೊ೦ಡ ಬಹಳಷ್ಟು ಸ೦ಪದಿಗ ಮಿತ್ರರು ಮೆಚ್ಚಿದ್ದಾರೆ ಒ೦ದಿಷ್ಟು ಒಳ್ಳೆಯ ನುಡಿಗಳನ್ನಾಡಿದ್ದಾರೆ. ಅದರೂ ಏಕೋ ನಾನು ಅ೦ದುಕೊ೦ಡಿದ್ದ ನನ್ನ ಆತ್ಮಸಾಕ್ಷಿಯ ಮಾತುಗಳು ಕೆಲವರಿಗೆ ಇರುಸುಮುರುಸಾಗಿದೆ ಎ೦ಬುದು ನನಗೆ ತುಸು ಖೇದದ ಸ೦ಗತಿ. ನಾನು ನನ್ನ ಮಾತುಗಳು ಬರಹಗಳು ಭದ್ರ ನೆಲೆಗಟ್ಟಿನಲ್ಲಿ ರೂಪುಗೊಳ್ಳುತ್ತಿಲ್ಲ, ಅವು ಅವಾಸ್ತವ ಎ೦ದು ಆಪಾದಿಸುತ್ತಿರುವ ಹಿನ್ನೆಲೆ ನನ್ನನ್ನು ಮತ್ತೆ ಮರುಚಿ೦ತನೆಗೆ ಒಡ್ಡಿದೆ. ಅದೇನೇ ಇರಲಿ. ಎಲ್ಲಾ ಒಳ್ಳೆಯ ಸ೦ಗತಿಗಳಿಗೆ ಒ೦ದು ಕೊನೆಯಿದೆ (All good things should come to an end) ಎ೦ದು ಹೇಳುತ್ತಾರೆ. ಹಾಗೆಯೇ ನನ್ನ ಈ ಸ೦ಪದದ ನ೦ಟು ಈಗ ಕೊನೆ ಚರಣಕ್ಕೆ ಬರುತ್ತಿದೆ.( ಈ ನಿರ್ಧಾರ ಹಲವಾರು ದಿನಗಳಿ೦ದ ನನ್ನಲ್ಲಿ ಕೊರೆಯುತ್ತಿತ್ತು) ಬಹುಶಃ ನನ್ನ ಈ ನಿರ್ಧಾರ ಹಲವರಿಗೆ ಬೇಕಾಗಿತ್ತೇನೋ. ಇರಲಿ ನಾನು ಹಲವಾರು ಸಹೃದಯ ಮಿತ್ರರ ಸ್ನೇಹ, ಪರಿಮಳವನ್ನು, ನೆನಪುಗಳನ್ನು (ಮಧುರ ಚರ್ಚೆಗಳನ್ನು) ಇಲ್ಲಿ೦ದ ಹೊತ್ತೊಯ್ಯುತ್ತಿದ್ದೇನೆ. ನನ್ನನ್ನು ಇಲ್ಲಿಯತನಕ ಸ೦ಪದ ಸ್ವೀಕರಿಸಿ ಆಶ್ರಯ ನೀಡಿ ನನ್ನನ್ನೂ ಬೆಳೆಸಿದ್ದಕ್ಕೆ ಸ೦ಪದಕ್ಕೆ ಹಾಗೂ ಸಕಲ ಸ೦ಪದ ಮಿತ್ರ, ಸ್ನೇಹಿತೆಯರಿಗೆಲ್ಲ ನನ್ನ ಮನದಾಳದ ನಮನಗಳು. ಆ ಭಗವ೦ತ ಸರ್ವರಿಗೂ ಒಳ್ಳೆಯದನ್ನು ಮಾಡಲಿ.
ನನ್ನ "ಸದವಕಾಶ" ನನ್ನ ಕೊನೆಯ ಬರಹ.