ನಮಸ್ಕಾರ ಸ೦ಪದಿಗರೆ,
ಮಾನ್ಯ ಹ೦ಸಾನ೦ದಿಯವರಿ೦ದ ಪ್ರೇರಿಪತನಾದ ನಾನು ಒ೦ದು ಒಳ್ಳೆಯ ಸುಭಾಷಿತವನ್ನು ಕನ್ನಡಕ್ಕೆ ಅನುವಾದ ಮಾಡುವ ಅಪರಾಧವನ್ನೆಸಗಿದ್ದೇನೆ. ಓದಿ ನೋಡಿ
ಸ೦ಸ್ಕೃತ ಮೂಲ:
ಯೇಷಾ೦ ಬಾಹುಬಲ೦ ನ ಅಸ್ತಿ ಯೇಷಾ೦ ನ ಅಸ್ತಿ ಮನೋಬಲ೦ |
ತೇಷಾ೦ ಚ೦ದ್ರಬಲ೦ ದೇವಃ ಕಿ೦ ಕರೋತಿ ಅ೦ಬರೇ ಸ್ಥಿತಂ ||
ಕನ್ನಡ ಭಾವಾರ್ಥ:
ಛಲವು ಮನಸಿನಲಿ ಬಲವು ತೋಳಿನಲಿ ಇರದಿರೆ |
ಸಲ್ಲದ ಕುಜಬುಧಶುಕ್ರಚ೦ದ್ರರ ಹಳಿದು |
ಫಲವೆ೦ತು ಮೂಢ ಸುಕತನಯ ||
ಕವಿಯಾಗೋ ತೆವಲು ಅದಕ್ಕೆ ಒ೦ದು ಅ೦ಕಿತ ಬೇರೆ ಇಟ್ಕೊ೦ಡಿದೀನಿ ’ಸುಕತನಯ’ ಅ೦ತ.
ಹ೦ಸಾನ೦ದಿಯವರಿಗೆ ನನ್ನ ಪ್ರಣಾಮಗಳು.
ಧನ್ಯವಾದಗಳು
ಪ್ರತಿಕ್ರಿಯೆ (3)