ಕನ್ನಡಿ ಮುಂದೆ ಇಂದು
ಮುಕ್ಕಾಲು ಘಂಟೆ
ಅಲಂಕರಿಸಿಕೊಂಡಿದ್ದರೂ
ಅವನು ನನ್ನತ್ತ ಕಿಂಚಿತ್ತೂ ನೋಡಲಿಲ್ಲ
ಎಂದು ಬೇಸರಿಸಿಕೊಂಡ ಹುಡುಗಿ..

ಅವಳನ್ನು ಹಾಗೆ ತಿನ್ನುವ ಹಾಗೆ
ನೋಡುತ್ತಿದ್ದೇನೆಂದು ತಿಳಿದರೆ
ಅವಳೆಲ್ಲಿ ತನ್ನನ್ನು
ಜೊಲ್ಲುಬುರುಕ
ಅಂದುಕೊಂಡುಬಿಡುವಳೋ
ಎಂದು ಹೆದರಿ ಡೀಸೆಂಟ್ ಆಗಿ
ತಲೆ ತಗ್ಗಿಸಿ ಕುಳಿತ ಹುಡುಗ..

ಜಗತ್ತಿನ ಅದ್ಭುತ ಪ್ರೇಮಕತೆಯನ್ನು
ಇಬ್ಬರೂ ಸೇರಿ ಶುರುವಾಗುವ
ಮೊದಲೇ ಕೊ(ನೆ)ಲೆ ಮಾಡಿದರು...