ಹಸಿರೊಡೆದ ಹುಲ್ಲಿನ ಹೊದಿಕೆಯಲಿ
ಭೂದೇವಿ ಕಂಗೊಳಿಸುತಲಿ
ಚೈತ್ರದ ಚಿಗುರೆಲೆಗಳಲಿ
ತುಂಬಿದ ಗಿಡ-ಮರಗಳಲಿ
ಮೊಗ್ಗೊಡೆದು ಹೂವರಳಿ
ಮಕರಂಧ ಸೂಸುತಲಿ
ಕೂಗಿಹುದು ದುಂಬಿಗಳ
ದುಂದುಬಿ ನಾದಗಳ ಅಲೆಗಳಲಿ
ಹಕ್ಕಿಗಳ ಚಿಲಿ-ಉಲಿ
ಚಲಿಸಿ ದೂರದಲಿ
ಸಾರಿತು ಹೊಸ ಋತುವನಿಲ್ಲಿ
ಬಂದನೋ ಬಂದನೋ ನವ ವಸಂತ ಬಂದನು
ತಂದನೋ ತಂದನೋ ಹೊಸ ಹರುಷವ ತಂದನು!!!
ನವ ವಸಂತ ಸಂಪದಿಗರೆಲ್ಲರಿಗೂ ಹೊಸ ಚೈತನ್ಯ, ಹೊಸ ಹರುಷವನ್ನು ತರಲಿ!!!
ಪ್ರತಿಕ್ರಿಯೆ (5)