ಸಂಪದದ ಮಿಲನವೇ "ಸಮ್ಮಿಲನ"

ಸಂಪದದ ಮಿಲನ, ಹಿಂದೆ ಎಲ್ಲಿ ಆಗಿದೆಯೋ ಎನಗೆ ಗೊತ್ತಿಲ್ಲ
ಸಂಪದದ ಮಿಲನ, ಎಷ್ಟು ಬಾರಿ ನಡೆದಿದಿಯೋ ಅದರ ಅರಿವಿಲ್ಲ
ಆಗಿ ಹೋಗಿರುವ ಆ ಮಿಲನಗಳ ಮಾಹಿತಿಯನ್ನು ಇಲ್ಲಿಯವರೆಗೆ ನಾ ಸಂಗ್ರಹಿಸಿಲ್ಲ
ಮಿಲನ ಮುಂದೆ ಎಲ್ಲಿ ನಡೆಯುವುದೋ ಇನ್ನು ತೀರ್ಮಾನವಾಗಿಲ್ಲ
ಬಂದಿರೋ ಅಹ್ವಾನಕ್ಕೆ ಯಾರು ಸರಿಯಾಗಿ ಒಂದು ನಿರ್ಧಾರಕ್ಕೆ ಬಂದಿಲ್ಲ

ಶ್ರೀಧರ್ (ಹರಿಹರಪುರ ಶ್ರೀಧರ್) ಅವರು ಹೀಗೆನ್ನುತ್ತಾರೆ
"ಆಗಲಿ ಮಿಲನವು ಶಿಲ್ಪಕಲೆಗಳ ತವರೂರಾದ ಹಾಸನದಲ್ಲಿ"
ದೃಶ್ಯ ಪ್ರದೀಪ ಹೇಳ್ತಾರೆ
"ಮಿಲನವು ಸಾಗಲಿ ಸಕ್ಕರೆಯ ಬಟ್ಟಲು ಎನಿಸಿಕೊಂಡ ಮಂಡ್ಯದಲ್ಲಿ"
ನಾಗರಾಜ್ (ಮರಾ) ಅದಕ್ಕೆ ಹೀಗೆ ಪ್ರತಿಕ್ರಿಯಿಸುತ್ತಾರೆ
"ಎಲ್ಲಾದರೂ ಸರಿ, ಹೇಗಾದರೂ ಸರಿ, ಮಿಲನಕೆ ಹಾಜರು ನಾವು ನಡೆಯುವ ಜಾಗದಲ್ಲಿ"
ಇಷ್ಟೆಲ್ಲ ಓದಿದ ಮೇಲೆ ನಾ ಹೇಳಲಾರೆ
"ಇರುವುದೇ ಇಲ್ಲ ಆ ಸಮಯದಿ ನಾನು ಕರ್ನಾಟಕದಲ್ಲಿ"
ಸಂಪದಿಗರೆಲ್ಲ, ಕವನದ ರಚನೆಗೆ ಮೂಲ ಕಾರಣ ಕೇಳಿದರೆ
ವ್ಯಕ್ತಪಡಿಸಲಾರೆ, ಏಕೆಂದರೆ, "ನಡೆಯುವ ಸಮ್ಮಿಲನದ ಕುತೂಹಲದ ಯೋಚನೆಯಲ್ಲಿ"