ಸ್ವಾತಂತ್ರ್ಯಕ್ಕೆ ಹೋರಾಡಿದವರ ನಾವು ನೆನೆಯುತಿರಬೇಕು
ನಮ್ಮ ಮಕ್ಕಳಿಗೆ, ಅವರೆಲ್ಲರ ಬಗ್ಗೆ ತಿಳಿಸಿ ಹೇಳುತಿರಬೇಕು
ವೀರರ ಧೈರ್ಯ, ಸಾಹಸಗಳ ಬಗ್ಗೆ ಮಕ್ಕಳಿಗೆ ಹೇಳುತ್ತಾ
ಬೆಳೆಸಬೇಕು ಮಕ್ಕಳನ್ನು ದೇಶಪ್ರೇಮವ ತುಂಬುತ್ತಾ
ಹೀಗೆ ಮಾಡಿದರೆ ಮರುಹುಟ್ಟಿ ಬರಬಹುದೇನೋ ಮತ್ತೊಬ್ಬ ಭಗತನೂ
ಕಾಣಬಹುದೇನೋ ನಾಡು, ಮುಂದೊಮ್ಮೆ ಇನ್ನೊಬ್ಬ ಸುಖದೇವನನೂ
ಮುದ್ರಿಸದಿರಿ ಪಠ್ಯಪುಸ್ತಕಗಳಲ್ಲಿ ಬರೇ ಗಾಂಧಿ, ನೆಹರೂರ ವಿಷಯವ
ಜೊತೆ ಜೊತೆಗೆ ಮುದ್ರಿಸಿರಿ ಅನ್ಯ ಲಕ್ಷ ವೀರ ಯೋಧರ ಚರಿತೆಯ
ಇನ್ನಾದರೂ ಏಳಿರಿ, ಎಚ್ಚೆತ್ತುಕೊಳ್ಳಿರಿ
ನಮ್ಮ ಭವ್ಯ ನಾಡನ್ನು ಉಳಿಸಿರಿ!
ಪ್ರತಿಕ್ರಿಯೆ (3)