ಸಂಪದ ಸ್ನೇಹಿತರಿಗೆಲ್ಲಾ ಯುಗಾದಿಯ ಹಾರ್ದಿಕ ಶುಭಾಶಯಗಳು

ನವೋದಯದ ಕಿರಣ ಮೂಡಿದೆ
ಮನೆಮನದ ಕದವ ತಟ್ಟಿದೆ
ವಿರೋಧಿಸದೆ ವಿರೋಧಿ ನಾಮದ
ಬೆಳಕನ್ನು ಸ್ವಾಗತಿಸೆ
ಏಳಿ ಏದ್ದೇಳಿ......

ನೆನ್ನೆಗಳ ಕತ್ತಲೆ ತೊಳೆದು
ಸಂಭ್ರಮದ ರಂಗವಲ್ಲಿ ಇಟ್ಟು
ಪ್ರೀತಿಯ ತೋರಣ ಕಟ್ಟಿ
ಸ್ನೇಹದ ಹೂವ ಮುಡಿಸಿ
ಬರ ಮಾಡಿ ಒಳಗೆ...

ಮಾವು ಬೇವಿನ ಚಿಗುರಲಿ
ಬೆಲ್ಲದ ಸವಿ ಬೆರಸಿ
ಭಾಂದವ್ಯದ ಹೂರಣ ಮಾಡಿ
ಒಟ್ಟಾಗಿ ಹಂಚಿ ತಿನ್ನುವ
ಬರ ಮಾಡಿ ಒಳಗೆ....

ನೋವು ನಲಿವಿನ ಜೀವನ
ಅರಿತು ಬೆರೆತರೆ ಪಾವನ
ಚೈತ್ರದೊಲುಮೆಯ ಸಮ್ಮಿಲನ
ನಮಗೂ ನಿಮಗೂ ತರಲಿ
ಸದಾ ನವ ಚೇತನ...!!