ನಿನ್ನೆ ರಾತ್ರಿ ಮಲಗಲು ಹೊರಟವನಿಗೆ ಮೊಬೈಲ್ ಸಂದೇಶ ಬಂದ ನೆನಪಾಯಿತು. ಸಹೋದ್ಯೋಗಿಯೋರ್ವರ ಸಂದೇಶ. "ಮೂರು ಜನ ನಿಮ್ಮ ಮೊಬೈಲ್ ನಂಬರ್ ಕೇಳಿದ್ರು. ನಾನು ಕೊಡಲಿಲ್ಲ. ಬದಲಾಗಿ ನಿಮ್ಮ ಮನೆಯ ವಿಳಾಸ ಕೊಟ್ಟಿದ್ದೇನೆ.ನಾಳೆ ಅವರು ನಿಮ್ಮ ಮನೆಗೆಬರಬಹುದು,"ಎಂಬ ಸಂದೇಶ ನೋಡಿ ಆಶ್ಚರ್ಯವಾಯಿತು. ಮೊಬೈಲ್ ನಂಬರ್ ಕೇಳಿದ್ರೆ ಕೊಡೋದು ಬಿಟ್ಟು ಮನೆಗೆ ಯಾಕಪ್ಪಾ ಕಳುಹಿಸಿದ್ರು ಎಂದು ತುಸು ತಲೆ ಕೆಡಿಸಿಕೊಳ್ಳುವಷ್ಟರಲ್ಲಿ ನಿದ್ರೆ ಬಂತು.ಮುಂಜಾನೆ ನೋಡಿದರೆ ಇನ್ನೊಂದು ಸಂದೇಶ ಇದೆ. ಅದೇ ಸಹೋದ್ಯೋಗಿಯದ್ದು. "ನಾನು ಕಳುಹಿಸಿದ ಆ ಮೂರು ಜನರನ್ನು ಸ್ವಾಗತಿಸುವಿರಲ್ಲಾ?ಅವರ್ಯಾರು ಗೊತ್ತಾಯಿತೇ? ಸುಖ,ಶಾಂತಿ ಮತ್ತು ಸಮೃದ್ಧಿ ಇವರುಗಳು ನಿಮ್ಮ ಮನೆಗೆ ಬರಲಿರುವ ಮೂವರು-ಅವರನ್ನು ಸ್ವಾಗತಿಸಿ,ನಿಮ್ಮಲ್ಲೇ ನೆಲೆಸುವಂತೆ ಮಾಡಿ!"
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..
ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರ
ಚುಕ್ಕುಬುಕ್ಕಿನಲ್ಲಿ ಆನ್ಲೈನ್ ಪುಸ್ತಕ ಬಿಡುಗಡೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)