ಕರೆಯೋಲೇ.. ಕರೆಯೋಲೆ
ಬರೆದೇ ಕಡಲ ಅಲೆ ಮೇಲೆ
ನಿನ್ನಾ ಸೇರೋ ಮೊದಲೇನೇ
ನೆನೆದೂ ಹರಿದೂ.. ಚೂರಾಗಿದೆ..
ಇದು ನನ್....ನಾ ಕಥೆ
ದಾರಿ ಹೇಗೆ ನಾ ತಿಳಿಯುವುದು..?
ಹೆಸರಿಲ್ಲದ ನಿನ್ನ ಊರಿನಲಿ.
ಕಣ್ಣಾ ಕಿತ್ತು ಹೀಗೆ ಬಿಡಬಹುದೆ..?
ಕೊನೆಯಿಲ್ಲದಾ ಮರಳಗಾಡಿನಲಿ.
ನೆರಳ ಹುಡುಕೊ ಆಸೆಯಲಿ
ಕಳೆದೆ ಹೋದೆ ಪ್ರೀತಿಯಲಿ.
ಗೆಳತಿ ನಿನ್ನ ಕ್ಷಮೆ ಇರಲಿ..
ಇದು ನನ್....ನಾ ಕಥೆ
ಖಾಲಿ ಖಾಲಿ ಈ ಮನದೊಳಗೆ,
ಉಳಿದಿರುವುದು ನಿನ್ನ ನೆನಪೊಂದೆ.
ಚೂರು ಚೂರಾದ ಕನಸುಗಳ,
ಗುಡಿಸೋಕೆ ಬಾ ಎದೆಯ ಗುಡಿಸಲಿಗೆ.
ಹಣತೆ ಹಿಡಿದು ನಿನಗಾಗಿ,
ಅಲೆದೆ ಹುಡುಕೊ ಸಲುವಾಗಿ.
ಕೊನೆಗೂ ಉಳಿದೆ ಮರೆಯಾಗಿ..
ಇದು ನನ್....ನಾ ಕಥೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!