ಯಾವಾಗಲೂ ಹಾಗೆ ಮಾಡುತ್ತಿದ್ದೆ ಒಂದಿನಾನೂ ಈ ಟ್ರಾಫಿಕ್ ಪೋಲೀಸರು ಹಿಡಿದಿರಲಿಲ್ಲ
ನೆನ್ನೆ ಎಂದಿನಂತೆ ಒನ್ ವೇ ನಲ್ಲಿ ಸ್ಕೂಟಿ ವಿರುದ್ದ ದಿಕ್ಕಿನಲ್ಲಿ ತಂದು ಟರ್ನ್ ಮಾಡಲು ಬರುತ್ತಿದ್ದಂತೆ
ಟ್ರಾಫಿಕ್ ಪೋಲೀಸ್ ತಡೆದರು. ಅವರು ನಂಗೆ ಗೊತ್ತಿರೋರೆ. ಯಾವಾಗಲೂ ನಾನು ಅದೇ ದಾರೀಲಿ ಹೋಗೋದು,
ಬರೋದು. ಆಗೆಲ್ಲಾ ತಡೆದಿರಲಿಲ್ಲ
ಟ್ರಾಫಿಕ್ ಪೋಲೀಸರ ಜೊತೆ ಬಹಳ ಜೊತೆ ಮಾತಾಡಿದ್ದರೂ ಸಿಕ್ಕಿ ಹಾಕಿಕೊಂಡು ಮಾತಾಡಿದ್ದು ಇದೇ ಮೊದಲು
ನನ್ನ ಡಾಕ್ಯುಮೆಂಟ್ಸ್ ತೋರಿಸಿದೆ . ಎಲ್ಲಾ ಚೆಕ್ ಮಾಡಿದ ಮೇಲೆ ಹೇಳಿದ್ದು
" ಏನ್ ಮೇಡಮ್ ನಿಮ್ತರದೋರೆ ಹೀಗ್ಮಾ ಡಿದ್ರೆ ಇನ್ನು ಬೇರೆಯೋರು ಇನ್ನೇನು ಮಾಡ್ತಾರೆ."
"ಬೆಳಗ್ಗೆ ತಾನೆ ಇದೇ ದಾರೀಲಿ ಹೀಗೆ ಬಂದ ಕಡೆ ಒಂದು ಆಕ್ಸಿಡೆಂಟ್ ಆಗಿದೆ. ಅದಕ್ಕೆ ಇನ್ಮೆಲೇ ಈ ಥರ ಕ್ರಾಸ್ ಮಾಡಿಕೊಂಡು ಬರಬೇಡಿ ಆಮೇಲೆ ಫೈನ್ ಹಾಕಬೇಕಾಗುತ್ತೆ ಇದು ಕಡೇ ವಾರ್ನಿಂಗ್" ಎಂದ
ತಪ್ಪು ನನ್ನದಲ್ಲವೇ
"ಫೈನ್ ಎಷ್ಟು.ನಾನು ಫೈನ್ ಕಟ್ಟ್ರೀನಿ "ಎಂದು ಕೇಳಿದ
"ನೂರು ರೂಪಾಯಿ " ಎಂದ
ದುಡ್ಡು ಕೊಟ್ಟು ರಸೀತಿ ತೆಗೆದುಕೊಂಡು ಬಂದೆ
ತಪ್ಪು ಮಾಡಿದ ಮೇಲೆ ಶಿಕ್ಶೆ ಅನುಭವಿಸಲೇ ಬೇಕಲ್ಲವೇ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
(ಸಂಪದದ ಎಲ್ಲಾರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು)
ಮೂರ್ತಿ ಪೂಜೆ ಬೇಕೆ ಬೇಡವೇ?
ಭಾರತದಲ್ಲಿ ಕ್ರಿಸ್ತ ಶಕದ ಬಳಕೆಯೇ ಏಕೆ ಮತ್ತು ಹೇಗೆ ಬಂದಿತು
ಮಾಹಿತಿ ಬೇಕಿದೆ - ಕೇಂದ್ರ ಮಂತ್ರಿಗಳು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)