ಸಂಪದಿಗರೆ!
ಆರ್ಯಭಟ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲುಗೊಳ್ಳುವಂತೆ ಆಹ್ವಾನವನ್ನು ನೀಡುತ್ತಿದ್ದೇನೆ.
ದಿನಾಂಕ: ೨೯.೦೪.೦೯
ಸ್ಥಳ: ರವೀಂದ್ರ ಕಲಾಕ್ಷೇತ್ರ
ಸಮಯ: ಸಂಜೆ ೫.೦೦-೬.೩೦: ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ ೬.೩೦ ರಿಂದ: ಪ್ರಶಸ್ತಿ ವಿತರಣಾ ಸಮಾರಂಭ.
ಈ ಸಂಜೆ, ಕರ್ನಾಟಕ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆಯನ್ನು ಮಾಡಿರುವ ಅನೇಕ ಮಹನೀಯರಿಗೆ, ಆರ್ಯಭಟ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸುತ್ತಿದ್ದಾರೆ. ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಹೋದಂತೆ, ಇವರೆಲ್ಲರ ಜೊತೆಯಲ್ಲಿ ನನಗೂ ಈ ಪ್ರಶಸ್ತಿಯನ್ನು ಪಡೆಯುವ ಅವಕಾಶ ಒದಗಿದೆ. ಕನ್ನಡ ವೈದ್ಯಸಾಹಿತ್ಯದಲ್ಲಿ ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.
ಈ ಸಂಜೆ, ನೀವೂ ಈ ಸಮಾರಂಭದಲ್ಲಿ ಭಾಗಿಯಾದರೆ, ನನಗೆ ತುಂಬಾ ಸಂತೋಷವಾಗುತ್ತದೆ. ನಿಮ್ಮೆಲ್ಲರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಪಡೆಯುವುದು ನಿಜಕ್ಕೂ ಹೆಮ್ಮೆಯೆನಿಸುತ್ತಿದೆ.
ಬರುವಿರಲ್ಲಾ...
ನಿಮ್ಮ ಬರವನ್ನು ನಿರೀಕ್ಷಿಸುತ್ತಿರುವ
-ನಾಸೋ
ಪ್ರತಿಕ್ರಿಯೆ (16)