ಅನಿಲ್ರಮೇಶ್ ಅವರ ಈ ಸುಂದರ ಚಿತ್ರ ನೋಡಿದಾಗ ಆದ ಸಂತೋಷ ಮತ್ತೆ ಶಿವು ಅವರ ‘ಮರ ಉಳಿಸಿ, ಮೆಟ್ರೊ ಕಳಿಸಿ’ ಬ್ಲಾಗ್ ಓದಿದಾಗ ಆದ ಆತಂಕವೇ ನನ್ನ ಈ ಅಳಲಿಗೆ ಕಾರಣವಾದವು.
ಓ ರವಿತೇಜ....
ನಿನ್ನ ತಡೆದು, ಇಳೆಗೆ ನೆರಳನೀವ
ಭಾಗ್ಯ ನನಗಿನ್ನಿಲ್ಲ ದೊರೆಯೇ,
ಹುಲುಮಾನವರೆನ್ನ ಕುಲವನೀಗ
ಸಂಪೂರ್ಣ ನಾಶದಾ ಹಾದಿಗಟ್ಟಿಹರು - ನಿನಗೆ
ತಡೆಯಿಲ್ಲದಂತೆ ಕದವ ತೆರೆದಿಹರು
ಅಲ್ಲಲ್ಲಿ ಓಜೋನ್ ಪದರವ ಕೊರೆದಿಹರು.
ಅನಿಲ್ರವರ ಈ ಚಿತ್ರವನೇ ತೋರಿಸಿ,
ತಮಗರಿವಿಲ್ಲದೇ ಮಾಡಿದ ತಪ್ಪಿಗೆ,
ಅರಿವಿದ್ದೂ ಈಗ ಮಾಡುತಿಹ ತಿಳಿಗೇಡಿತನಕೆ
ವನಸಿರಿಯ ಸೊಬಗು ಹಿಂದಿತ್ತು ಹೀಗೆ
ಎಂದುಲಿಯಲಿ ತಮ್ಮ ಮುಂದಿನ ಪೀಳಿಗೆಗೆ!
ಅವರ ಕರ್ಮವದು ಅನುಭವಿಸಲಿ
ಚಿಂತಿಸಿ ಫಲವೇನು? ಸಾವೆನಗೆ ಕಟ್ಟಿಟ್ಟ ಬುತ್ತಿ
ಬುದ್ಧಿಯಿಲ್ಲದವರಿಗೆ ತಿಳಿಹೇಳಲಾರಿಗಿಹುದು ಶಕ್ತಿ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಭೂಪ್ ಕಛೇರಿ
ಆಕಾಶವಾಣಿ ನಿರ್ದೇಶಕರಾದ ಸಂಗೀತಕಲಾನಿಧಿಯೋರ್ವರ ಅನುಭವ
ಕನಕದಾಸರ ಮುಂಡಿಗೆಗಳು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)