ಇತ್ತೀಚಿನ ದಿನಗಳಲ್ಲಿ ಸದಾಸಂ ನನಗೆ ಊರುಗೋಲು. ಹದಿನೇಳು ವರ್ಷಗಳ ಹಿಂದೆ ಹಾರು ಯಂತ್ರದ ಅಪಘಾತವೊಂದರಲ್ಲಿ ಸಿಲುಕಿ ಸೊಂಟ ಪುಡಿಯಾದ ಕಾರಣ ಓಡಾಟಕ್ಕೆ ಕಷ್ಟವಾಗುತಿತ್ತು. ಮಳೆಗಾಲದಲ್ಲಂತೂ ತೋಟಕ್ಕೆ ಹೋಗಲಾರದೆ ಪೂರ್ತಿ ಸೋತು ಹೋಗುತ್ತಿದ್ದೆ. ಈ ಮದ್ಯೆ ಕಾಣ ಸಿಕ್ಕ ಅಪತ್ಬಾಂದವ ಆಂಗ್ಲ ಬಾಷೆಯಲ್ಲಿ ATV ಎಂದು ಕರೆಯಲ್ಪಡುವ ಈ ಸಕಲ ದಾರಿ ಸಂಚಾರಿ, ಸದಾಸಂ.
ಕಳೆದ ಇಪ್ಪತ್ತು ತಿಂಗಳು ಇದನ್ನು ಉಪಯೋಗಿಸಿದ ಅನುಭವ ನನ್ನದು. ಇದರ ಬಗೆಗೆ ಮಾಹಿತಿಗಿಂತ ತಪ್ಪು ಹುಚ್ಚು ಕಲ್ಪನೆ ನಮ್ಮಲ್ಲಿ ಹೆಚ್ಚು ಚಲಾವಣೆಯಲ್ಲಿದೆ. ಅದಕ್ಕಾಗಿ ನನ್ನ ಅನಿಸಿಕೆ ಅನುಭವಗಳ ಬ್ಲೋಗ್ ರೂಪದಲ್ಲಿ ಬರೆಯುತ್ತಿದ್ದೇನೆ. ಆಸಕ್ತರು ಬೇಟಿ ನೀಡಿ. http://atvindia.blogspot.com/
ಪ್ರತಿಕ್ರಿಯೆ (3)