ನನಗೊಂದು ಅರ್ಧ ಅಂಗಿ ಸಿಕ್ತು. (ಹರಿದ ಅಂಗಿಯಲ್ಲ). ದುಬಾಯಿನಲ್ಲಿ ಭೇಟಿಯಾದ ನನ್ನ ದೂರದ ನೆಂಟರೊಬ್ಬರು ಪದೇ ಪದೇ ಮನೆಗೆ ಕರೆಯುತ್ತಿದ್ದರು! ಹಾಗೆ ಸುಮ್ಮನೆ ನೆಂಟನಾಗಿ ನಾನು ಅವರ ಮನೆಗೆ ಹೋದೆ! ಅಲ್ಲಿ ಅವರು ಅವರ ಅಣ್ಣನ ಮಗಳನ್ನು ನೋಡಲು ಕರೆದದ್ದಾಗಿ ತಿಳಿಸಿದರು. ನಾನು ಹುಡುಗಿ ನೋಡುವ ತಯಾರಿಯಲ್ಲಿ ಹೋಗಲಿಲ್ಲ, ಆದ್ರೂ ಅವರ ಬಲವಂತದಿಂದ ನಾನು ಆಕೆಯನ್ನು ನೋಡಿದೆ. ಹೋಗಿದ್ದು ಆಕೆಯನ್ನು ನೋಡಲು ಅಲ್ಲ, ಆದರೆ ಹೋದಾಗ ಅವಳನ್ನು ನೋಡಲು ಅವಸರ ಸಿಕ್ತು. ಅವಳಿಗೂ ಹೇಳ್ದೆ
ನಮ್ಮ ಸಂಭಾಷಣೆ ಹೀಗಿತ್ತು:
ನಾನು: "ನಿನ್ನ ಹೆಸರು?"
ಆಕೆ: "ಮಿಶ್ರಿಯಾ"
ನಾನು: "ಏನು ಓದಿದ್ದೀಯ? "
ಆಕೆ: "ಪಿ. ಯು. ಸಿ"
ನಾನು: "ನಾನು ಬಂದದ್ದು ಹುಡುಗಿ ನೋಡಲಿಕ್ಕೆ ಅಲ್ಲ, ದೇವರು ನಿಶ್ಚಯಿಸಿದರೆ ಮುಂದೆ ನಾವಿಬ್ಬರೂ ಒಂದಾಗಬಹುದು"
ಆಕೆ: (ಮೌನ)
ನಾನು: "ನನ್ನನ್ನು ಇಷ್ಟವಾಯಿತಾ ?"
ಆಕೆ : (ನಾಚಿಕೆಯಿಂದೇನೋ ಗೊತ್ತಿಲ್ಲ, ತಲೆ ತಗ್ಗಿಸಿ ನಕ್ಕಳು !!!)

ಇಷ್ಟು ಮಾತ್ರ ಮಾತನಾಡಿ ನಾನು ಮರಳಿ ಬಂದೆ...

ಒಂದು ದಿನ ಬಿಟ್ಟು ನನ್ನ ಮನೆಯವರನ್ನು ಕಳುಹಿಸಿದೆ... ಅವರೂ ನೋಡಿ ಬಂದರು ... (ಅವರಿಗೂ ಹುಡುಗಿ, ಹುಡುಗಿ ಕಡೆಯವರೆಲ್ಲರನ್ನೂ ಇಷ್ಟವಾಯಿತು) ಎರಡು ದಿನ ಬಿಟ್ಟು ಅವರ ಮನೆಯವರೂ ಬಂದರೂ, ನಿಶ್ಚಿತಾರ್ಥವೇನೂ ಇರಲಿಲ್ಲ, ಅವರು ಬಂದ ದಿನವೇ ಮದುವೆ ದಿನಾಂಕವನ್ನೂ ನಿಶ್ಚಯಿಸಿದರು. ಮುಂದಿನ ತಿಂಗಳು ಜೂನ್ ೨೮ ರಂದು ನಾನು ಆಕೆಯ ಕೈ ಹಿಡಿಯಲಿದ್ದೇನೆ.

ಬಶೀರ್ ಚೇರಂಬಾಣೆ, ಕೊಡಗು