ನಾನೊಮ್ಮೆ ಯೋಚಿಸಿದ್ದುಂಟು
ನಾನು ಸತ್ತಂತೆ ನಟಿಸ ಬೇಕು|
ಹಾರ ತುರಾಯಿಗಳ ಭಾರದಿಂದ ಬಳಲಿ ಹೋಗ ಬೇಕು|
ನನ್ನ ಬಂಧುಬಳಗ,ಸ್ನೇಹಿತರು,ಹಿತಚಿಂತಕರು,
ಸಾಹಿತ್ಯ ಕ್ಷೇತ್ರದ ಮಿತ್ರರು ಜಾತ್ರೆ ಯೋಪಾದಿಯಲಿ ಸೇರುವುದ ಕಿರಿಗಣ್ಣಿನಿಂದಲೇ ನೋಡಬೇಕು|
ಅಣ್ಣ ತಮ್ಮ, ಅಕ್ಕ ತಂಗಿಯರು
ಪತ್ನಿ ಪುತ್ರರು-ಮಿತ್ರರು
ಬಿಕ್ಕಿ ಬಿಕ್ಕಿ ಅಳುವಾಗ
ಎದ್ದು ಚಕಿತಗೊಳಿಸಬೇಕು!!
-೨-
ಅದೊಂದುದಿನ ಸಾಹಿತ್ಯವೇದಿಕೆಯಲಿ
ಕುಸಿದಾಗ ನರ್ಸಿಂಗ್ ಹೋಮ್ ಸೇರಿಸಿ
ಮನೆಗೆ ಸುದ್ಧಿ ಮುಟ್ಟಿಸಿ ಕೈ ತೊಳೆದುಕೊಂಡ ಸನ್ಮಿತ್ರರು
ಮತ್ತೆ ಅತ್ತ ಸುಳಿಯಲಿಲ್ಲ|
ಅಕ್ಕ ತಂಗಿಯರು ಅಣ್ಣ ತಮ್ಮಂದಿರು ಕರೆಯ ಸ್ವೀಕರಿಸಲಿಲ್ಲ|
ಉದ್ದುದ್ದ ಬರೆಯುತ್ತಿದ್ದ ಪತ್ರಿಕೆಗಳಿಗೆ ಸುದ್ಧಿಯಾಗಲಿಲ್ಲ|
ಬಂದವರು ಬೆರಳೆಣಿಕೆ ಜನ!
ಆರು ತಿಂಗಳಾಗಿದೆ, ಅಂಗಡಿ ಸಾಲ ತೀರಿಸಲಿಲ್ಲವಲ್ಲಾ!
ಹಾಲಿನವರ ಬಾಕಿ ಕೊಡಲಿಲ್ಲ ವಲ್ಲಾ!!
ಕೆಲಸದಾಕೆಯು ಬರುವುದನ್ನು ನಿಲ್ಲಿಸಿದರೂ
ಹಿಂದಿನ ಬಾಕಿ ಕೊಟ್ಟಿರಲಿಲ್ಲ ವಲ್ಲಾ!!
ಬಂದಿದ್ದರು ವಸೂಲಿಗಾಗಿ,
ಆಫೀಸಿನಿಂದ ಬಂದಿದ್ದ ಪರಿಹಾರ ಮೊತ್ತದ ಹಂಚಿಕೆಗಾಗಿ!!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವೇದಜ್ಞಾನವೆಂದರೆ ಕೇವಲ "ಮಂತ್ರಪಾಠವೇ?
ಈ ದೇಹವು ಭಗವಂತನು ನಿರ್ಮಿಸಿದ ದೇವಾಲಯ
ನಾವೆಲ್ಲರೂ ಶ್ರೀ ಮನ್ನಾರಾಯಣರಾಗಿ ಹಿಂದು ಧರ್ಮದ ರಕ್ಷಣೆ ಮಾಡೋಣ.-ಶ್ರೀ ಶಂಕರಪ್ಪನವರ ಕರೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)