ಬಾ ತಂಗಾಳಿಯೇ ಬಾ
ನನ್ನವಳ ಬಿಸಿಉಸಿರ
ತಂಪಾಗಿಸು ಬಾ
ಬೆವರಿ ಇಬ್ಬನಿಯ
ಹನಿ ಮುಡಿರುವ ಅವಳ
ಹಣೆಗೆ ನಿನ್ನಾ ಸ್ಪರ್ಶದ
ಚುಂಬನವ ನೀಡು ಬಾ
ಏರುತ್ತಿರುವ ಎದೆ ಬಡಿತಕೆ
ಕುಗ್ಗುತಿರುವ ಆ ಶ್ವಾಸಕ್ಕೆ
ನಿನ್ನಾ ತಂಪಿನ ಆಸ್ವಾದವ
ನೀಡು ಬಾ
ಬಾ ತಂಗಾಳಿಯೇ ಬಾ
ನಮ್ಮಿಬ್ಬರ ಮಿಲನದ
ಮಧುರ ಈ ಕ್ಷಣದಲ್ಲಿ
ಆ ಮಳೆಯ ಹನಿಯ ಎಳೆದು ತಾ
ಪ್ರತಿಕ್ರಿಯೆ (6)