ಹೌದು ಇದೆಲ್ಲ ನಿಜಾನ ಅಂತ ಈ ಮಾಟ ಮಂತ್ರ ..ದೆವ್ವ.....
ನನಿಗಂತು ಯಾವ ಅನುಭವಗಳು ಆಗಿಲ್ಲ ಆದರೆ ತೀರ ಹತ್ತಿರದವರ ಸತ್ಯವಾದ ಅನುಭವ ಕೇಳಿದೀನಿ
ಘಟನೆ . ೧
(ತುಂಬಾ ಒಳ್ಳೆಯ ಮೃದು ಸ್ವಭಾವದ , ಮುಗ್ದ ಜನರು)ಅವರ ಮನೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲ ರು ಹೂಶಾರು ತಪ್ಪಿದರು, ಹಸುವೊಂದು ಸತ್ತಿತು, ಮನೆಯ ಒಡತಿ ಹಾಸಿಗೆ ಹಿಡಿದಳು ಮೈಮೇಲೆ ಪ್ರಘ್ನೆಯೆ ಇರಲಿಲ್ಲ....ಇನ್ನೇನು ಸಾವು ನಿಶ್ಚಿತ ಎಂದು ನಂಬಿದರು....ಮನೆಯ ಸೊಸೆಯು ಜ್ವರಕ್ಕೆ ತುತ್ತಾದಳು ಎಷ್ಟು ಡಾಕ್ಟರರಿಗು ತೋರಿಸಿದರು ಏನಾಗಿದೆ ಎಂದು ತಿಳಿಯಲಿಲ್ಲ..ಇನ್ನು ಎನೇನೊ ಮನೆಯಲ್ಲಿ ಘಟನೆಗಳು ನಡೆದವು....ಸರಿ ಅವರು ನಂಬಿದ್ದ ದೇವರ ಹೇಳಿಕೆಯನ್ನು ಕೇಳಿದರು ಅದರ ಪ್ರಕಾರ ನಿಮ್ಮ ಹತ್ತಿರದವರೆ ನಿಮಗೆ ಈ ರೀತಿ ಮಾಡಿಸಿದ್ದಾರೆ ಎಂದು ತಿಳಿಸಿತು...ಯಾರು ಎಂದು ಅವರಿಗೆ ಅನುಮಾನ ಇದ್ದಿದ್ದು ಅವರ ಮಗಳ ಅತ್ತೆಯ ಹೆಸರನ್ನು ಹೇಳಿದರು ,ಅವರೆ ಎಂದು ಹೇಳಿತು..ಸರಿ ಅಳಿಯನಿಗೆ ಕರೆಸಿ ವಿಷಯ ತಿಳಿಸಿದರು......ಅವರು ತುಂಬಾ ಒಳ್ಳೆಯವರೆ ಅವರಿಗು ಅವರ ತಾಯಿಯ ಬುದ್ಧಿ ಗೊತ್ತಿತ್ತು...ತಾಯಿಯನ್ನು ಜೋರು ಮಾಡಿ ಬಾಯಿಬಿಡಿಸಿದರು ಅವರ ತಾಯಿ ಕೊನೆಗೆ ನಿಜವೆಂದು ಒಪ್ಪಿದರು ನಂತರ ಪೂಜೆ ಇತ್ಯಾದಿಗಳನ್ನು ಮಾಡಿದ ನಂತರ ಇದ್ದಕ್ಕಿದ್ದಂತೆ ಎಲ್ಲವು ಸರಿಯಾಯಿತು.

ಘಟನೆ ೨
ಅವಳನ್ನು ನೋಡಿದೆ ತುಂಬಾ ಸುಂದರವಾಗಿದ್ದಳು ಪಕ್ಕದ ಮನೆಗೆ ಊರಿನಿಂದ ಬಂದಿದ್ದರು...ಒಂದು ದಿನ ಮಾತನಾಡಿಸಿದೆ ಊರು ಹೆಸರು ಕೇಳಿದೆ...ಸಾಗರ ಹೆಸರು ಮೈಥಿಲಿ ಎಂದಳು...ಸರಿ ಬಿ ಬಿ ಎಮ್ ಮಾಡಿತಿದ್ದೆನೆ ಎಂದಳು ಹಾಗೆ ಮಾತನಾಡುತ್ತ ಪರಿಚಯವಾಗಿ ಯಾಕೆ ನಿನ್ನ ಕೊರಳಲ್ಲಿ ಇಷ್ಟೊಂದು ತಾಯತ ಎಂದು ಕೇಳಿದೆ....ಅಯ್ಯೊ ಅದು ದೊಡ್ಡು ಕಥೆ ಬೆಡಿಕ ಅಂದಳು ಕೊತುಹಲ ಹೆಚ್ಚಾಯಿತು...ಏನ್ಹೇಳು ಎಂದೆ.....ಅಕ್ಕ ನಮ್ಮ ಮನೆ ಸಾಗರದ ಸ್ಮಶಾನದ ಎದರುಗಡೆನೆ ಇರುವುದು..ಅಲ್ಲಿ ಒಂದು ದೆವ್ವವಿದೆಯಂತೆ ಮೊದಮೊದಲು ಇವಳ್ನ್ನು ಯಾರೊ ಕರೆದಂತಾಗುತ್ತಿತ್ತಂತೆ....ತನ್ನ ಭ್ರಮೆ ಎಂದು ಸುಮ್ಮನಾಗಿದ್ದಳಂತೆ ಅದು ನಿತಂರವಾದಗ ಇವಳಿಗೆ ಭಯಶುರುವಾಯಿತಂತೆ ಇವಳು ಮಲಗಿದರೆ ಯಾರೊ ತನ್ನ ಮೇಲೆ ಕೈ ಹಾಕಿದಂತೆ, ಇವಳ ಪಕ್ಕ ಬಂದು ಕೂತಂತೆ, ಇವಳ ಪಕ್ಕದಲ್ಲಿ ಯೂರೊ ಸರಿದು ಹೋದಂತೆ ಹೀಗೆ ಹಲವಾರು ಅನುಭವಗಳು......ಒಂದು ದಿನ ಇವಳ ಮನೆಯ ಹಿಂದೆ ಯಾರೊ ಅಳುತ್ತಿರುವ ಶಬ್ದ ಕೇಳಿತಂತೆ ಆದರೆ ಯಾರು ಕಾಣಿಸಲಿಲ್ಲ ಆದರೆ ಯಾರೊ ಅಳುತ್ತ ನನಗೆ ಮೋಸ ಮಾಡ್ದ ಅಂತ ಅಳುತಿತ್ತಂತೆ, ಇದ್ದಕ್ಕಿದ್ದಂತೆ ಮನೆಯ ಬಲ್ಪ್ ಕೆಳಗೆ ಬಿತ್ತಂತೆ ನೋಡಿದರೆ ಬಲ್ಪ್ ಏನೊ ಆಗಿರಲಿಲ್ಲ, ಒಂದು ದಿನ ಅವರ ತಂಗಳಪೆಟ್ಟಿಗೆಯಲ್ಲಿಟ್ಟ ಹಣ್ಣಿನ ಕವರ್ ಕಾಣ್ಲಿಲ್ಲವಂತೆ ...ಎಲ್ಲಿ ಹೋಯಿತು ಎಂದು ಹುಡುಕಾಡಿ ಮತ್ತೆ ನೋಡಿದಾಗ ಅಲ್ಲೆ ಇದೆ ಹೀಗೆ ಹಲವಾರು ಘಟನೆಗಳು.... ಇದರಿಂದ ಬೇಸತ್ತ ಅವಳಿಗೆ ಅದು ಸಾಮಾನ್ಯವಗಿ ಹೋಯಿತಂತೆ ಮೊದಮೊದಲಿದ್ದ ಭಯ ಹೋಯಿತು ಅದೆಲ್ಲಾದರು ಇವಳನ್ನ್ನು ಕರೆದರೆ ಎದರಿಗೆ ಬಂದು ಮಾತಾಡು ಎಂದು ಜೋರುಮಾಡುತ್ತಾಳಂತೆ ಆಗ ಅದು ಸುಮ್ಮನಾಗುತ್ತಂತೆ..ಹೀಗೆ ಹಲವಾರು.....

ಇದರಬಗ್ಗೆ ನಿಮ್ಮ ಅನಿಸಿಕೆ ಏನು?