ಛಾಯಾಗ್ರಹಣದಲ್ಲಿ ಬೆಳಕಿನ ಉಪಯೋಗ ಹೇಗೆ ಪ್ರಮುಖವೋ ಅಂತೆಯೇ ಸಂಯೋಜನೆಯೂ ಕೂಡ. ಈ ಹಿಂದೆ ಚಿತ್ರ ಸಂಯೋಜನೆಯ ಬಗ್ಗೆ ___LINK_OPEN_href=" http://www.sampada.net/article/14298" target="_blank"___ಇಲ್ಲಿ ಬರೆದಿದ್ದೇನೆ. ಇದೇ ನಿಯಮಗಳನ್ನು ಮನದಲ್ಲಿರಿಸಿ ನಾವು ತೆಗೆಯ ಹೊರಟ ಚಿತ್ರದ ಪರಿಣಾಮ ನೋಡುಗರ ಮನದಲ್ಲಿ ಹೇಗೆ ಪರಿಣಾಮಕಾರಿಯಾಗಿ ಚಿತ್ರಿಸಬಹುದು ಎಂದು ಉದಾಹರಣೆಯ ಮೂಲಕ ನೋಡೋಣ.


ಈ ಮೇಲಿನ ಚಿತ್ರ ಹಾಲು ಕುಡಿಯುತ್ತಿರುವ ಮರಿಯದ್ದು. ಇಲ್ಲಿ ಫ್ರೇಮಿಂಗಿಗಾಗಿ ಬಿದಿರನ್ನು ಚಿತ್ರದಲ್ಲಿ ಅಳವಡಿಸಿಕೊಂಡಿದ್ದರೂ, ತಾಯಿಯ ಎಡ ಕಣ್ಣಿನಲ್ಲಿ ಇಲ್ಲವಾದ ಕ್ಯಾಚ್ ಲೈಟ್, ತಾಯಿಯ ಓವರ್ ಎಕ್ಸ್ಪೋಸಾದ ದೇಹ ಭಾಗ ಚಿತ್ರದ ಅಂದ ಕೆಡಿಸಿದೆ.


ತಾಯಿಯ ಮುಖದಲ್ಲಿನ ಕೊರತೆಯನ್ನು ಹೋಗಲಾಡಿಸಲು, ಈ ಮೇಲಿನಂತೆ ಇನ್ನೊಂದು ರೀತಿಯ ಕ್ರಾಪ್ ಮಾಡಿ ನೋಡಿದಾಗ, ತಾಯಿಯ ರುಂಡ ಇಲ್ಲದಿರುವಿಕೆ ನೊಡುಗರಿಗೆ ಸರಿಕಾಣದಿರಬಹುದು. ಅಲ್ಲದೇ ಇಲ್ಲಿ ಬಿದಿರಿನ ಫ್ರೇಮಿಂಗ್ ಇದ್ದರೂ ತಾಯಿಯ ಓವರ್ ಎಕ್ಸ್ಪೋಸಾದ ದೇಹ ಭಾಗ ಇನ್ನೂ ಕಾಣಿಸುತ್ತಿದೆ.


ಈ ಮೇಲಿನ ಚಿತ್ರವನ್ನು ಮತ್ತೂ ಕ್ರಾಪ್ ಮಾಡಿ ಈ ಮೇಲಿನಂತೆ ಪ್ರದರ್ಶಿಸಿದಾಗ, ಹಾಲು ಕುಡಿಯುತ್ತಿರುವ ಮಗುವಿನ ನೋಟ ನೋಡುಗರಲ್ಲಿ ಹೆಚ್ಚಿನ ಪರಿಣಾಮ ಬೀರುತ್ತಿದೆಯಲ್ಲದೇ ಮೇಲೆ ತಿಳಿಸಿದ ಕೊರತೆಗಳನ್ನು ಹೆಚ್ಚಿನ ಮಟ್ಟಿಗೆ ಮೀರಿಸುವಲ್ಲಿ ಸಹಾಯಕವಾಗಿದೆ.

ಕೊನೇಯ ಚಿತ್ರ ದೊಡ್ಡ ಪ್ರಿಂಟ್ ತೆಗೆಯುವಲ್ಲಿ ನನಗೆ ಸಹಾಯಕವಾಗದಿದ್ದರೂ ಮುಂದೆ ಇದೇ ರೀತಿಯ ಚಿತ್ರ ತೆಗೆಯಲು ಅವಕಾಶ ಸಿಕ್ಕಿದರೆ, ನಾನು ಈಗ ಕ್ರಾಪಿಂಗಿನಲ್ಲಿ ಮಾಡಿದ ಪ್ರಯೋಗ ನೆರವಿಗೆ ಬರುತ್ತದೆ. ಒಂದು ಒಳ್ಳೆಯ ಚಿತ್ರ ಸಾವಿರ ಪದ ಹೇಳಿದರೆ ಒಂದು ಕೆಟ್ಟ ಚಿತ್ರ ಕನಿಷ್ಟ ಒಂದು ಪಾಠವನ್ನಾದರೂ ಕಲಿಸುತ್ತದೆ.

ಸಾರಾಂಶ:
ಚಿತ್ರದ ಚೌಕಟ್ಟನ್ನು ತುಂಬಿಸುವುದರ (filling the frame) ಮೂಲಕ, ನೀವು ಚಿತ್ರದ ಮೂಲಕ ವ್ಯಕ್ತಪಡಿಸ ಹೊರಟ ಭಾವನೆಯನ್ನು ಚೆನ್ನಾಗಿ ವ್ಯಕ್ತಪಡಿಸಬಹುದು.