ನಿನಗೂ, ನನಗೂ ಮಾತ್ರ
ಅರ್ಥವಾಗುವ ಭಾಷೆಯಲ್ಲಿ ಮಾತನಾಡೋದು
ನಿನಗೂ, ನನಗೂ ಮಾತ್ರವೇ
ಅರ್ಥವಾಗುವ ಸಡಗರ

ಕಳೆದ ಅಸ್ತಮಯದ ನಂತರ
ಯಾವ ಗಿಡದಲ್ಲಿ ಯಾವ ಹೊಸ ಹೂವು ಅರಳಿತೋ ಎಂದು
ಹುಡಿಕಿಕೊಳ್ಳುವ ಸೂರ್ಯನಂತೇ
ನಿನ್ನ ಹೊಸ ಹೊಸ ಮಾತುಗಳಲ್ಲಿ
ಗಾರುಡೀಗಳನ್ನು ಹುಡಿಕಿಕೊಳ್ತೀನಿ !

ಮೃದುವಾದ ನಿನ್ನ ಕೈಗಳಲ್ಲೇ
ನನ್ನ ಭವಿಷ್ಯವಿರುವುದೆಂದು
ನೆನಸಿಕೊಂಡರೇನೇ ದೊಡ್ಡ ಆಶ್ಚರ್ಯ !

ಕಾಣುವ ಪ್ರತಿ ಮುಖದಲ್ಲೂ ನೀನೇ !
ವ್ಯಕ್ತಿ ದೂರವಾಗಿರುವ ಅವ್ಯಕ್ತ ಸ್ಥಿತಿಯಲ್ಲೇನೇ ಏನೋ
ಆಲೋಚನೆಗಳು ಗಾಢವಾಗುತ್ತವೆ!

ಆದರೂ ದೂರಗಳಿಗೇನು
ಬೇಗ ಸಾಗಿದರೇ ಹೀಗೇ ಕರಗಿಹೋಗ್ತವೆ !

ಬಹುಶಹಾ!
ನಾವು ಕಲಿಯುವ ಕ್ಷಣ
ಆ ತಿರುವಿನಲ್ಲೇ ಕಾದಿರಬಹುದು