(ಕೊಂಡಮುದಿ ಸಾಯಿಕಿರಣ್ ಕುಮಾರ್ ತೆಲುಗು ಕವನ ವರ್ಷಂ ಲಾ ಗೆ ಕನ್ನಡಾನುವಾದ)

ವರ್ಷಗಳು ಕಳೆದರೂ

ಊರುಗಳು ಬದಲಾದರೂ

ಮಣ್ಣಿನಲ್ಲಿ ಬೆರೆಯುವ

ಮೋಡದ ಕಂಪು ಬದಲಾಗಿಲ್ಲ

 

ಎಷ್ಟೆಷ್ಟು ಅನುಭೂತಿಗಳನ್ನು

ಹೊರಹೊಮ್ಮಿ

ಎದೆಯಾಳದಲ್ಲಿ

ನೆನಪುಗಳನ್ನು ಹೊರತೆಗೆಯುತ್ತದೋ!

 

ಒಮ್ಮೆ

ಮೋಡದಲ್ಲಿ ಹುಟ್ಟಿ

ಮಣ್ಣಿನಲ್ಲಿ ಹೊರಳಾಡಬೇಕೆನ್ನಿಸುತ್ತಾಯಿದೆ…