ತೋಟೆಯಲ್ಲಿ ಕುಳಿತು
ಹೃದಯದೊಂದಿಗೆ ಮಾತನಾಡುವುದು
ಒಂದು ಹವ್ಯಾಸ
ಹೂಗಳಿಂದ ದೂರ ಸರಿದು ಹೋಗುವ
ಪರಿಮಳಗಳನ್ನು
ಗೋಡೆಗಳ ಮೇಲೆ
ವಿಚಿತ್ರ ಚಿತ್ರಗಳನ್ನು ಬಿಡಿಸುವ
ರೆಂಬೆಗೆಳ ವಿನ್ಯಾಸವನ್ನು
ಗಿಡಗಳ ನೆರಳಿನಲ್ಲಿ
ತಿರುಗಾಡುವ ಇರುವುಗಳ ಸಾಲುಗಳನ್ನು
ನೋಡುತ್ತಾ ಕೂಡುವದೊಂದು ಹವ್ಯಾಸ
ಗಾಳಿಯ ರಭಸಕ್ಕೋ
ಅಥವಾ ನನ್ನ ಊಹೆಗಳ ಸುರಿಮಳೆಗೋ
ಗೊತ್ತಿಲ್ಲ
ತಪೋಭಂಗವಾದ ಮಲ್ಲಿಗೆ ಗಿಡ
ನಾಲ್ಕು ಹೂಗಳನ್ನು ಉದಿರಿಸಿಬಿಡ್ತು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!