ಬೆಳಗಿನಜಾವ:
ಇದೊಂದು ಉನ್ಮತ್ತ ಭಾವಾವೇಶ ಮೋಹಪಾಶ ಬದ್ಧ ಕ್ಷಣ. ಕ್ಷణిಕವೋ, ಶಾಶ್ವತವೋ ಅರ್ಥವಾಗದ ಗೂಡಾರ್ಥಗಳ ವಿಪರ್ಯಾಸಗಳಲ್ಲಿ ಜಾರುತ್ತಾ...ಜಾರುತ್ತಾ..ಜಾರುತ್ತಾ...
ನೆನಪುಗಳ ಹೊಡತಕ್ಕೆ ವಿಕಲವಾಗಿ, ವಿಯೋಗ ಹೊಂದಿದ ಮನಸು-ಆಲೋಚನೆ, ಯಾವುದಕ್ಕೆ ಅದೇ ಬಿಡಿಬಿಡಿಯಾಗಿ ತಾಂಡವಿಸುತ್ತಾಯಿವೆ. ಅವುಗಳ ಭಯೋದ್ವಿಗ್ನ ನರ್ತನಾವರ್ತಗಳಿಂದ ತಪ್ಪಿಸಿಕೊಂಡು ಆజ్ఞాತ ತಿಮಿರಗಳ ತೀರದಲ್ಲಿ ಓಡಾಡುತ್ತಿದ್ದೀನಿ.
ಕಲ್ಲಾಗಿಹೋದ ದೇಹದಲ್ಲಿ ಪೂರ್ವ ನಿಯಂತ್ರಿತ ಚರ್ಯೆಗಳು ಅಸಂಕಲ್ಪಿತವಾಗಿ ನಡೆದುಹೊಗುತ್ತಾಯಿವೆ. ಎಲ್ಲವೂ "ಯಂತ್ರಾರೂಢಾನಿಮಾಯಯಾ"ನಂತೆ..ಅಷ್ಟೆ ಅಷ್ಟೆ ! ಕೊನೆಯಿಲ್ಲದ ಜೀವಿಗೆ ಕೊನೆಯೇಸಿಕ್ಕದ ದೇವರೇ ಮಿತ್ರ. ಅಷ್ಟೆ, ಅಷ್ಟೆ !!
*************
ಮಧ್ಯಾಹ್ನ:
ಒಂದೊಂದು ತುತ್ತನ್ನೂ ಒಳಗೆ ಎಳುಕೊಳ್ಳುತ್ತಿರುವ ನಾಲಿಗೆ ಸಾವಿರ ಲಕ್ಷ ಪದಗಳನ್ನ ವದರುತ್ತಾಯಿದೆ !! ಸರಸ್ವತೀ ಹಸ್ತಾಲಂಕೃತ ಅಕ್ಷಮಾಲೆಯಂತೇ ಅಕ್ಷರಗಳು. ಭಯದೋಗ್ರ ಚಂಡ ಚಂಡಿಕಾ ಗಳಾವೃತ ರುಂಡಮಾಲೆಯಂತೇ ಅವೇ ಅಕ್ಷರಗಳು. ರೂಪವಿಲ್ಲದ, ಪಾಪವೊಲ್ಲದ, ತಾಪವಿಲ್ಲದ ಅಕ್ಷರಗಳು, ಗೇಯಗಳಂತೇ...ಹೇಯಗಳಂತೇ...ಕಂಠನಾಳಗಳಿಂದ ಹೊರ ಚಿಮ್ಮುತ್ತಾ...ಬೀಳುತ್ತಾ...!
ಬಂಧುಗಳಲ್ಲಿ ಏಕಾಂಗಿ. ಬಂಧುಗಳಿಲ್ಲದ ಏಕಾಂಗಿ. ಏಕಾಂಗಿ ಬಂಧು. ಏಕಾಂಗಿಯೇ ಬಂಧು. ಏನಿದೆಲ್ಲಾ ? ಶಾಖಾಚಂಕ್ರಮಣವಾ ? ಚರ್ವಿತಚರ್ವಣವಾ ? ಪುನರುಕ್ತಿಯಾ ?
ಮಿತ್ರನೊಬ್ಬ ಸತ್ತ ವಾರ್ತೆಯ ಕೇಳಿಯೂ ಚಲಿಸಲಿಲ್ಲ ! ಕಠೋರ ಸತ್ಯವು ಚೂಪಾಗಿರುವದಿಲ್ಲವೇ ? ಅಥವಾ ನಿಷ್ಟುರ ಜೀವನಾನುಭವ ದಗ್ಧ ಮಾನಸವು ಬಂಡೆಯಂತೇಯಾಗುವುದೇ ? ಇಷ್ಟಕ್ಕೂ ಈ ಪಾಂಚಭೌತಿಕದಲ್ಲಿ ನಡಿತಿರೋದು ಏನು ? ಸಾಧನೆಯೆ ? ವೇದನೆಯೇ ?
*************
ರಾತ್ರಿ:
ಕುದುರೆಯ ಖರಪುಟಗಳನ್ನ ಭುಜದ ಮೇಲೆ ಹೊತ್ತಹಾಗೆ, ಗಾಂಡೀವದಲ್ಲಿ ತ್ರಿಶೂಲವನ್ನ ಹೂಡುತ್ತಿದಂತೇ....ನನ್ನ ಕನಸುಗಳು. Dream represents reality in symbols ಅಂತ ಹೇಳಿದ್ದು ಯಾರು ಹೇಳೀ !!
"ಏನು ತೊಗೊಂಡುಬಂದಿದ್ದೀವೀ ?" ಎನ್ನುವ ಮಿಥ್ಯಾವೇದಾಂತಿಯ ಮಾತಿನಲ್ಲಿ ಗುಪ್ತವಾಗಿ, ಸುಪ್ತವಾಗಿದ್ದ ಸುಳ್ಳು. ಯಾವುದೋ ಪ್ರಯೋಜನಾರ್ಥವೇ ಈ ಲೋಕಕ್ಕೆ ಬಂದಹಾಗೆ ಕೃಷ್ಣನು, ಬುದ್ಧನು, ಶಂಕರನು.
ಜಟಿಲ ಜೀವನ ಪಟಲದ ಮೇಲೆ ಕುಟಿಲ ವೇದಾಂತ ಧೂಮ.
ಧೂಮ...ಹೋಮ...ಕಾಮ. ಕಾಮಹೋಮಧೂಮಧಾಮದ ಒಳಗೆ...ಒಳಗೊಳಗೆ...ಪ್ರೇಮ. ಸ್ನಿಗ್ಧ, ಮುಗ್ಧ, ಅಮಲಿನ.
ಹಸುಗೂಸು ಉಜ್ವಲ ನೇತ್ರಗಳ ಆಳಕ್ಕೆ ಧುಮಿಕಿದರೇ ಮನುಷ್ಯನ ಮೂಲ ಸಿಗುತ್ತದೆ. ಧೂಕುವುದು ಹಾಗಿರಲಿ ಅಂಬಿಗಾಲು ಹಾಕಿಲಿಕ್ಕೂ ಆಗುತ್ತಯಿಲ್ಲ !
ಭಂಗ, ವಿಕಲಾಂಗ, ಕುಂಠಿತ, ಕ್ಷತಗಾತ್ರ ಮಾನವನನ್ನ ಬೇಟೆಯಾಡುತ್ತದೆ ಲೋಕಮೃಗ.
ಮೃಗ...ಮೃಗ್ಯ. ಮೃಗತೃಷಣಾವೃತ ಮೈದಾನಗಳಲ್ಲಿ ಹರಿತವು ಮೃಗ್ಯ.
"ಏರಿ ಕುಳಿತಾ ಕೊಂಬೆ ಎರಡಾಗಿ ಮುರಿದರೇ..
ಯಾರೇನು ಮಾಡುವರು ಅವನಿಯೊಳಗೇ..."
ಅಂದರೇ ಮೃತ್ಯುಘೂಕಂ ಜೀವಶಾಖೇನ ತಿಷ್ಠತಿ ಅಂತನಾ !
ದಿವಾಂಧ ಮನೋ ಘೂಕಕ್ಕೆ ವಿಷಾದ ತಮಾಲಶಾಖವೇ ಸಿಂಹಾಸನ. ಕತ್ತಲಿನಿಂದ ಸುತ್ತಿಕೊಂಡುಹೋದ ಜೀವನಕ್ಕೇ ಘೂಕವೇ ಅಧಿದೇವತೆ.
ನಿರುಪಯೋಗಿ ಸಿನಿಮಾ ಹಾಡುಗಳ್ಲಿ...ಒಮ್ಮೊಮ್ಮ್..ಜೀವ ಜವಜವಯೆನ್ನುತ್ತದೆ...
ಜಿಂದಗೀ ತೋ ಬೇವಫಾ ಹೈ ಏಕ್ ದಿನ್ ಠುಕ್ರಾಯೆಗೀ
ಮೌತ್ ಮೆಹಬೂಬಾ ಹೈ ಉಸ್ಕೀ ಸಾಥ್ ಲೇಕರ್ ಜಾಯೆಗೀ
ಜಿಲ್ ಜಿಲ್...ದಿಲ್ will....ಮೆಹಬೂಬಾ ಮೌತ್ ಕೀ ಮೆಹಫಿಲ್
ಸಾವು....ಅಗಸನ ಬಂಡೆ...ಬಂಡೆಗೆ ಹಾಕಿ ಒಗಯುತ್ತಿರುವ ಹೃದಯ...ಹುಂ...ಆಹುಂ...ಸಾವಿನ ಗುಸುಗುಸು. ಛಿದ್ರವಸ್ತ್ರ ತೂತುಬೀಳುತ್ತಿದೆಯೆ ಹೊರೆತು ಬೆಳ್ಳಗಾಗುತ್ತಿಲ್ಲ.
ಮುಕ್ತಾಯ:
ಒಂದುಕಾಲದಲ್ಲಿ ಭ್ರಮರದಂತೇ ಭ್ರಮಿಸಿದ ಸೌಕುಮಾರ್ಯ ವಿಧಿಯ ಕಬ್ಬಿಣ ಕಾಲುಗಳ ಕೆಳಗೆ ಗತಿಸಿದಾಗ, ಅದರ ಮುರಿದ ದೇಹದಿಂದ ಹೊರೆಹೊಮ್ಮಿದ, ಮನೋವೈಕಲ್ಯ ಝರ್ಝರಿತವಾದ ಈ ಮಾತುಗಳೇ...ಒಂದು ಕಥೆಯಾಗಿ.....
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!