ಸಾಮ್ರಾಟರ ಇತಿಹಾಸಕ್ಕಾಗಿ ಭೇಟಿ ಕೊಡಿ: ___LINK_OPEN_href="http://tugalak.blogspot.com/" target=_blank___ತುಘಲಕ್
ಮಹಾಸಾಮ್ರಾಟರ ಪರಿಸರಪ್ರಿಯತೆಯ ಬಗ್ಗೆ ಎಲ್ಲರೂ ತಿಳಿದಿದ್ದೀರಿ. ಈಗ ಅವರಲ್ಲಿ ಅಡಕವಾಗಿರುವ ಸ್ವಚ್ಛತೆಯ ಪ್ರಜ್ಞೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕಾಗಿದೆ. ಅದಕ್ಕಾಗಿ ಈ ಸುತ್ತೋಲೆ.
ರಾಜ್ಯದ ಗೋಡೆಗಳು ನಮ್ಮ ದೇಶದ ಜನರ ದೇಹಬಾದೆಗಳನ್ನು ಹಿಂಗಿಸಲು ಎಷ್ಟು ಕಷ್ಟಪಡುತ್ತಿವೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಪ್ರಜೆಗಳ ಸೂಸೂವನ್ನು ಸಹಿಸಿಕೊಂಡು ಅವು ಮಂಕಾಗಿವೆ. ಇದಕ್ಕಾಗಿ ಪರಿತಾಪ ಪಡುತ್ತಿರುವ ಬಾದಷಹರು ಸಾಮ್ರಾಜ್ಯದ ಸೌಂದರ್ಯ ಹೆಚ್ಚಿಸಲು ಮತ್ತು ಪ್ರಜೆಗಳ ವಿಸರ್ಜನೆಯ ಸುಖ ಇನ್ನೂ ಹೆಚ್ಚಾಗಲೆಂದು ಒಂದು ಯೋಜನೆಯನ್ನು ಸಾವಿರ ವರಹಗಳ ವೆಚ್ಚದಲ್ಲಿ ಕೈಗೊಂಡಿದ್ದಾರೆ.
ಇದಕ್ಕಾಗಿ ಗೋಡೆಗಳ ಮೇಲೆ ಸಾಮ್ರಾಜ್ಯದ ಇತಿಹಾಸದ ಮತ್ತು ಸಂಸ್ಕೃತಿಯ ಭವ್ಯ ಪರಂಪರೆಯನ್ನು ಕುಂಚದ ಮೂಲಕ ಬಿಂಬಿಸಲು ಆದೇಶಿಸಲಾಗಿದೆ. ಇದಕ್ಕಾಗಿ ಪ್ರಖ್ಯಾತ ಚಿತ್ರಕಾರರನ್ನು ಕರೆಸಿ ಗೋಡೆಗಳ ಮೇಲೆ ಸಾಮ್ರಾಜ್ಯದ ಭವ್ಯ ಪರಂಪರೆಯನ್ನು ಬಿಂಬಿಸುವ ಚಿತ್ರಗಳನ್ನು ಬರೆಯಬೇಕೆಂದು ಆದೇಶಿಸಲಾಗಿದೆ.
ಇದು ಪ್ರಜೆಗಳಿಗೆ ಅತ್ಯಂತ ಸಂತೋಷವನ್ನು ನೀಡುವ ವಿಷಯವಾಗಿದ್ದು ಎಲ್ಲರೂ ಉಲ್ಲಸಿತರಾಗಿದ್ದಾರೆ. ಇನ್ನು ಮುಂದೆ ಪ್ರಜೆಗಳೆಲ್ಲಾ ಗೊಡೆಗಳ ಮೇಲಿನ ಚಿತ್ರಗಳ ಅಂದವನ್ನು ಸವಿಯುತ್ತಾ ಸೂಸೂ ಮಾಡಬಹುದು. ಖಾಲಿ ಗೋಡೆಗಳಿಗೆ ಸೂಸೂ ಮಾಡುವ ಬದಲು ಗೋಪುರದ ಮೇಲೋ ಅಭಿಸಾರಿಕೆಯರ ಮೂತಿಯ ಮೇಲೋ ಮಾಡಬಹುದು. ಪ್ರಜೆಗಳಿಗೆ ಇಂತಹ ಅದ್ಭುತವಾದ ಸವಲತ್ತನ್ನು ಕೊಟ್ಟಿರುವ ಬಾದಷಹರಿಗೆ ಪ್ರಜೆಗಳು ಅನಂತ ವಂದನೆಗಳನ್ನು ಅರ್ಪಿಸುತ್ತಿದ್ದಾರೆ.
ಇದಲ್ಲದೇ ಸ್ವಚ್ಛತೆಯ ನಾಡಗೀತೆಯನ್ನು ಸಧ್ಯದಲ್ಲೇ ಘೊಷಿಸಲಾಗುವುದು ಎಂದೂ ಬಾದಷಹರು ತಿಳಿಸಿದ್ದಾರೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!