ನಾನು ಪ್ರವಾಸ ಪ್ರಿಯ. ತಿರುಗಾಟ ಅಂದಮೇಲೆ ಮುಗೀತು! ಯಾರೇ ಕರೆಯಲಿ, ಹೆಗಲಿಗೊಂದು ಬ್ಯಾಗೇರಿಸಿ, ಆರಾಮಾಗಿ ಹೊರಟು ಬಿಡುತ್ತೇನೆ. ಹೊತ್ತಿಲ್ಲ ಗೊತ್ತಿಲ್ಲ! ಈ ಕೆಲಸದ ಜಂಜಡ ಇಲ್ಲದಿದ್ದರೆ ಯಾವತ್ತೂ ತಿರುಗುತ್ತಲೇ ಇರುತ್ತಿದ್ದೆನೇನೋ! ಏನು ಮಾಡೋಣ, ಆಗೋದಿಲ್ಲವೇ!
ಈ ಬಾರಿ ಸ್ವಲ್ಪ ದಿನ ಬಿಡುವು ಮಾಡಿಕೊಂಡು, ಹಂಪೆಗೆ ಹೋಗಿದ್ದೆ, ಸ್ನೇಹಿತರ ಜೊತೆ. ಹಂಪೆ, ನನ್ನಿಷ್ಟದ ತಾಣ. ಹೋಗಿದ್ದು ಕೆಲವೇ ಸಲ, ಆದರೆ ಜನ್ಮಾಂತರದ ಅನುಬಂಧ ಇದ್ದಂತೆ ಅನಿಸುತ್ತದೆ, ಹಂಪೆಗೂ- ನನಗೂ! ಅಲ್ಲಿನ ಕಲ್ಲು ಬಂಡೆಗಳ ಮಧ್ಯೆ, ಪಾಳು ಗುಡಿಗಳ ನಡುವೆ ಕಳೆದು ಹೋದಂತೆ ತಿರುಗುವುದು, ಬಲು ಆಪ್ಯಾಯಮಾನ, ನನಗೆ.
ಅರ್ಧ ಮುರಿದ ಹಳೆಯ ಗೋಪುರದಲ್ಲಿ ಕುಳಿತಿರುವ ಧ್ಯಾನಸ್ಠ ಸಂನ್ಯಾಸಿ, ವಿರೂಪಾಕ್ಷ ದೇವಾಲಯದ ಬೀದಿಯಲ್ಲಿನ ಮಣ್ಣೊಳಗಾಡುವ ಮಗು, ಆಗ ತಾನೆ ನೀರು ಸಿಕ್ಕಿ ಚಿಗುರುತ್ತಿರುವ ಜೋಳದ ಪೈರಿನ ನಡುವೆ ಸಂತೃಪ್ತ ಮುಖ ಭಾವ ಹೊತ್ತು ಕುಳಿತ ರೈತ, ತುಂಬಿ ಹರಿಯುತ್ತಿದ್ದ ತುಂಗೆಯನ್ನೆ ಬೆರಗಾಗಿ ದಿಟ್ಟಿಸುತ್ತಿದ್ದ ಗೃಹಿಣಿ, ಅದೇ ತುಂಗೆಯಲ್ಲಿ ಕಾಲು ಇಳಿ ಬಿಟ್ಟು ತಂಪು ಅನುಭವಿಸುತ್ತ ಕೂತಿರುವ ನೀಲಿ ಕಣ್ಣಿನ ಹುಡುಗಿ..
ಸೂರ್ಯಕಾಂತಿಯ ಹಳದಿ ಚಾದರ ಹೊದ್ದು ಮಲಗಿದಂತಿರುವ ಇಳೆ, ಶೃದ್ಧೆಯಿಂದ ದೇವಳದ ಕಂಬದ ಮೇಲಿನ ಗಣಪನ್ನ ಚಿತ್ರಿಸುತ್ತಿರುವ ಪ್ರವಾಸಿ.. ಖಾಲಿ ಗರ್ಭಗುಡಿಗೂ ಭಕ್ತಿಯಿಂದ ಕೈ ಮುಗಿಯುತ್ತಿರುವ ವೃಧ್ದೆ.. ಸಂಜೆಯ ಜಿನುಗು ಮಳೆಗೆ ತೋಯುತ್ತ ಬಂಡೆಗಳೆಡೆಯಲ್ಲಿ ಮಾಯವಾದ ಹುಡುಗ....
ಇವೆಲ್ಲ ನನಗೆ ಈ ಬಾರಿ ಹಂಪೆಯಲ್ಲಿ ಕಂಡು ಬಂದ ಕೆಲವು ಮಧುರ ರೂಪಕಗಳು..
ಒಮ್ಮೆ ಮಳೆ ಹೊಯ್ಯುವ ಸಮಯ ಹಂಪೆಗೆ ಹೋಗಿಬನ್ನಿ, ಇದಕ್ಕೂ ಸುಂದರ ಚಿತ್ರಗಳು ನಿಮಗೆ ಕಂಡಾವು,ನೋಡುವ ಕಣ್ಣಿದ್ದರೆ!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಅವಳ ಮನಸು
ಒಂದು ಬೆಳಗಿನ ಸಮಯ...
ಸಾಹಿತ್ಯ ಸಮ್ಮೇಳನದ ಹೊಸ್ತಿಲಿಗೊಂದು ಆಶಯ ಕವನ.
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!