ಇಂದು ಬೆಳಿಗ್ಗೆ ಒಂದು ಮೇಲ್ ನೋಡಿದೆ
" ಶ್ರೀಧರ್, ಹೇಗಿದ್ದೀರಾ?ಚೆನ್ನಾಗಿದ್ದೀರಿ, ಎಂದು ತಿಳಿಯುವೆ. ಇನ್ನುಮುಂದೆ ನನಗೆ ನೀವು ಪ್ರಮೂಶನಲ್ ಮೇಲ್ ಕಳಿಸಬೇಡಿ.ಅದು ನನಗೆ ಇಷ್ಟವಿಲ್ಲ."
ನೋಡಿದೊಡನೆ ಕಸಿವಿಸಿಯಾಯ್ತು.ಆನಂತರ ಹಾಗೇ ನನ್ನ ಮನದಲ್ಲಿಯೇ ಯೋಚಿಸಿದೆ " ಹೌದು ನನಗಿಷ್ಟವಾಗಿದ್ದೆಲ್ಲಾ ಎಲ್ಲರಿಗೂ ಇಷ್ಟವಾಗಬೇಕೆ? ಹಾಗೇನಿಲ್ಲವಲ್ಲಾ! ನಾನು ಯಾರ ಅಭಿಪ್ರಾಯ ತಿಳಿಯದೆ ನನ್ನೊಡನಿದ್ದ ಎಲ್ಲಾ ವಿಳಾಸಕ್ಕೂ ನನಗಿಷ್ಟವಾದ ಬರಹಗಳನ್ನು/ ಧ್ವನಿಗಳನ್ನು ಕಳಿಸಿಕೊಟ್ಟುಬಿಟ್ಟೆನಲ್ಲಾ!! ನಿಜವಾಗಿ ತಪ್ಪು ಮಾಡಿದೆನೆಂದು ಮಿತ್ರರ ಮೇಲ್ ನೋಡಿದ ಮೇಲೆ ಮನವರಿಕೆಯಾಯ್ತು. ಇನ್ನು ಹಾಗೆ ಮಾಡುವುದಿಲ್ಲ ಮಿತ್ರರೇ, ನನ್ನ ಮೇಲ್ ಗಳಿಂದ ಬೇಸರವಾಗಿದ್ದವರು ಕ್ಷಮಿಸಿಬಿಡಿ.
ಪ್ರತಿಕ್ರಿಯೆ (1)