'ಸತ್ಯ' ಏನಪ್ಪಾ ಅಂದ್ರೆ ಇದು ಪಕ್ಕ ಕಾಮೆಡಿ ಚಿತ್ರ ಅನ್ನೋದು!.'ಸುಳ್ಳು' ಅಂದ್ರೆ  ಈ ಸಿನೆಮಾಗೆ ಪೇಪರ್ನಲ್ಲಿ ಮೂರು ಸ್ಟಾರ್ ಕೊಟ್ಟಿರೋದು!.ಇನ್ನ 'ಗುಟ್ಟು' ಅಂದ್ರೆ ಇಂತ ಡಬ್ಬ ಚಿತ್ರ ನೋಡ ಹೋಗಿ ನಾನ್ ಯಾಮಾರಿದ್ದು! ;)

ಇಡಿ ಚಿತ್ರದಲ್ಲಿ ಅಲ್ಪ-ಸ್ವಲ್ಪ ನಗು ತರಿಸುವವರು ಕೋಮಲ್ ಮಾತ್ರ.ಒಂದಿಡಿ ಮನೆಯಲ್ಲೇ ಗಿರಕಿ ಹೊಡಿಯುವ ಕತೆ.
ಒಳ ಹೋಗಿ ಕುಳಿತವನಿಗೆ ೩ ಗಂಟೆ ಯಾವಾಗ ಮುಗಿಯುತ್ತೆ ಅನ್ನಿಸ್ತ ಇತ್ತು. ಸುಮ್ಮನೆ irritate ಮಾಡುವುದನ್ನೇ ನಿರ್ದೇಶಕ ಮಹಾಶಯ ತಮಾಷೆ ಅನ್ಕೊಂಡಿರ್ಬೇಕು.ಕಡಿಮೆ ಖರ್ಚಿನಲ್ಲೇ ರೀಲು ಸುತ್ತಿ ರಮೇಶ್-ಕೋಮಲ್ ಜೋಡಿಯನ್ನ ತೋರಿಸಿ ಚಿತ್ರ ಮಂದಿರದೊಳಗೆ ಕರೆಸಿಕೊಂಡು ಹಿಂಗಾ ಸ್ವಾಮೀ ಯಾಮಾರಿಸೋದು!

ಇನ್ಮೇಲೆ ಈ ಪೇಪರಿನವರು ತೋರಿಸೋ 'ನಕ್ಷತ್ರ' ನೋಡ್ಕೊಂಡು ಯಾವ್ ಸಿನೆಮಗೂ ಹೋಗಬಾರದು ಅಂತ ಡಿಸೈಡ್ ಮಾಡ್ಕೊಂಡು ಹೊರ ಬಂದವನೇ,ಗೆಳೆಯನ ಕೇಳ್ದೆ  'ಅದೇನ್ ಗುಟ್ಟು!?ಏನ್ ಸುಳ್ಳು!?ಯಾವ್ದು ಸತ್ಯ!?'.

 

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'