ಹಲವು ತಿಂಗಳನಂತರ ಸಂಪದಕ್ಕೆ ಮತ್ತೆ ಕಾಲಿಡುತ್ತಿರುವಾಗ ಒಂದು ರೀತಿಯ ಭಯ ಹಾಗು ಅದೇ ಸಮಯಕ್ಕೆ ನಿರುಮ್ಮಳ ಭಾವನೆಗಳು ಬರುತ್ತಿವೆ.  ಭಯ ಏಕೆಂದರೆ ಈ ಬ್ಲಾಗುಡಾಣಕ್ಕೆ/ಗಳಿಗೆ ಅಡಿಕ್ಟಾಗಿ ಬಿಟ್ಟಿದ್ದೀನೇನೋ ಅನ್ನಿಸುತ್ತೆ.. ಚಿಕ್ಕಂದಿನಿಂದಲೇ ಮನೆಯಲ್ಲಿ ಕಾಫಿ ಅಭ್ಯಾಸ ಮಾಡಿಸಿ ಅದನ್ನು ಬಿಡಲಾಗುತ್ತಿಲ್ಲ.  ಎರಡು ತಿಂಗಳು ಬಿಟ್ಟರೆ, ಮೂರನೇತಿಂಗಳಿಗೆ ಸಾಲಕೊಟ್ಟವರಂತೆ ಮತ್ತೆ ಅದೇ ಚಟ ಹಿಂದೆ ಬಿದ್ದಿರುತ್ತದೆ.

ಒಂದು ರೀತಿಯ ನೆಮ್ಮದಿ ಹೇಗೆಂದರೆ ಸಮಾಜದ ಎಲ್ಲ ಸ್ತರಗಳ ಜನರೂ ಇಲ್ಲಿ ಸಿಗುತ್ತಾರೆ. ಆಸ್ತಿಕತೆ, ನಾಸ್ತಿಕತೆ, ಸಮಾಜವಾದ, ರಾಜ ಕಾರಣ,ಕಲೆ,ಕಾದಂಬರಿ, ಕಥೆ ಎಲ್ಲವೂ ಸಿಗುವ ’ಬಿಟ್ಟಿ ತಾಣ’!! ಸಂಪದ ಮತ್ತೆ ಶುರುವಾಗುತ್ತಿರುವುದು ಸಂತೋಶ. ಸಧ್ಯ ಕನ್ನಡ ನೆಲದಲ್ಲಿರದ ನನಗೆ, ಈ ಬ್ಲಾಗೆಂಬ ಮಾಯಾ ಪರದೆಯ ಮೇಲೆ ಮೂಡುವ ಅಕ್ಕರಗಳೇ ಸ್ವಲ್ಪ ಸಂತಸ ನೀಡಿಯಾವು. ಇನ್ನು ಇಲ್ಲಿ ಕನ್ನಡ ಪದಗಳು ನಿರಂತರ ಹರಿದು ಬರಲಿ!!