"ಕನ್ನಡಿ ಎಂದೂ ಸುಳ್ಳು ಹೇಳೋದಿಲ್ವಲ್ಲಾ!", ಮನಸಿನಲ್ಲೇ ಪಿಸುಗುಟ್ಟಿದ ಮಹದೇವ್. ಆತ ಕನ್ನಡಿ ಮುಂದೆ ನಿಂತು ಹತ್ತು ನಿಮುಷಗಳ ಮೇಲೇ ಆಗಿದೆ. ಎಂದೂ ಇಲ್ಲದಂತೇ ಈಹೊತ್ತು ಕನ್ನಡಿಯಲ್ಲಿ ಅದೇಪರಿ ತನ್ನನ್ನು ತಾನು ನೋಡ್ಕೋಬೇಕಂತ ಅನ್ನಿಸುತಾಯಿದೆ. ಒಮ್ಮೊಮ್ಮೆ ನಾವು ಮಾಡುವ ಕೆಲಸಗಳಿಗೆ ಕಾರಣಗಳು ಇರೋದಿಲ್ಲವಲ್ಲಾ!
ಬೆರಳುಗಳಿಂದ ತಲೆಯ ಕೂದಲುಗಳನ್ನು ಸರಿಮಾಡುಕೊಂಡ. ಅಲ್ಲಲ್ಲಿ ಬಿಳಿ ಕೂದಲುಗಳು. ಚೆನ್ನಾಗಿ ಎದ್ದು ಕಾಣ್ತಾಯಿವೆ. "ಮೂವತ್ತಾರಕ್ಕೇ ಹೀಗೆ ಬಿಳಿಯಾದರೇ...ಮುಂದೆ...ಮುಂದೆ" ..ಮುಂದುವರಿಯೋದು ಇಷವಿಲ್ಲದಹಾಂಗೆ ನಿಂತುಹೋಯಿತು ಯೋಚನೆ.
ಕಿಡಿಕಿನಿಂದ ಹೊರಗೆ ಇಣಿಕಿನೋಡಿದ. ಮನೆ ಪಕ್ಕದಲ್ಲಿರುವ ಅಂಗಳದಲ್ಲಿ ಅದ್ಯಾವುದೋ ಪಕ್ಷಿ. ಅದರ ರೆಕ್ಕೆಗಳು ಹೊಳಿತಾಯಿವೆ. "ಇದರ ವಯಸ್ಸೆಷ್ಟಿರಬಹುದು? ಮುದಿಯಾದರೂನೂ ಇದರ ರೆಕ್ಕೆಗಳ ಹೊಳುಪು ಕಡಿಮೆಯಾಗದೇನೋ!". ಹಕ್ಕಿಯನ್ನ ನೋಡಿ ಸ್ವಲ್ಪ ಈರ್ಷ್ಯ ಹುಟ್ಟಿತು. ಯಾಕೇ? ಗೊತ್ತಿಲ್ಲ! ಮನವು ಮತ್ತೇ ಯೋಚನೆಗಳಯತ್ತ ಹೋಯಿತು.
"ಜಂತುಕೋಟಿಯಲ್ಲಿ ಶ್ರೇಷ್ಟವಾದದ್ದು ಮನುಜಾತಿ. ಆದರೂ ಅದೆಷ್ಟು ಬೆಲೆ ಇಲ್ಲದ ಬಾಳು. ಕಸ್ತೂರಿ ಮೃಗದ ಮಲವು ಸುಗಂಧದ್ರವ್ಯ. ಜಿಂಕೆಯ ಚರ್ಮ ತಪಸ್ಸು ಮಾಡಲು ಅರ್ಹ. ಶ್ರೇಷ್ಟ ಜಾತಿ ಯೆಂದು ಯಾರೂ ಮಾನವನ ಮಲವನ್ನು ಹಚ್ಚಿಕೊಳ್ಲುವದಿಲ್ಲ. ಅವನ ಚರ್ಮವನ್ನು ಆಸನವೆಂದು ಹಾಕ್ಕೊಳ್ಳೋದಿಲ್ಲ. ದೇವರು ಎಷ್ಟು ಪಕ್ಷಪಾತಿ. ಅಲ್ಲ..ಅಲ್ಲ...ತಿಳುವಳಿಕೆ ಇದ್ದವನು. ಕಸ್ತೂರಿ ಮೃಗಕ್ಕು, ಜಿಂಕೆಗೂ ಇಲ್ಲದ ಅಹಂಕಾರ ಮಾನವನಿಗಿದೆ. ಹಾಗಾಗಿಯೇ ದೇವರು ಬೆಲೆ ಇಲ್ಲದ ಬಾಳು ಮಾಡಿದ್ದಾನೆ."
ತಾನು ಬಹಳ ತಾತ್ವಿಕವಾಗಿ ಯೋಚಿಸುತ್ತಾಯಿರುವಂತೇ ಅನಿಸಿತು ಮಹದೇವ್ ಗೆ. ಬಿಳಿ ಕೂದಲು ತಾತ್ವಿಕ ಚಿಂತೆನೆಗೆ ಎಡೆ ಮಾಡ್ತುದಾ? ಇರಬಹುದು. ಸಿನಿಮಾಗಳಲ್ಲಿ ನೋಡಿ, ಎಲ್ಲ ಋಷಿ ಮುನಿಗಳಿಗೆ ಬಿಳಿ ಗಡ್ಡ, ಮೀಸಾ ಹಚ್ಚಿರ್ತಾರೆ.
ಈ ಆಲೋಚನಗಳಿಂದ ಈಗ ಕನ್ನಡಿಯಲ್ಲಿನ ಮುಖ ಮತ್ತಿಷ್ಟು ಮುದಿಯಾಗಿ ಕಾಣಿಸತೊಡಗಿದೆ.
ಬಿಳಿ ಕೂದಲು ಹತ್ತಿರ ಹತ್ತಿರ ಬರ್ತಾಯಿರೋ ಸಾವಿಗೆ ಸೂಚನೆ. ಎಷ್ಟು ಜಾಸ್ತಿ ಬಿಳಿನೋ ಅಷ್ಟು ಹತ್ತಿರ ಕೂತಿರತ್ತೆ ಸಾವು. ಎದೆ ಬಡಿತ ನಿಂತುಹೋದಂತೇ ಅನ್ನಿಸುತು ಮಹದೇವ್ ಗೆ. ಹೊರಿಗೆ ಆಗಸದಲ್ಲಿ ಕವಿದ ಮೋಡಗಳು, ಮಹದೇವ್ ನ ಮನಸಿನಂತೇ ಇವೆ.
**************
"ಬೇಗ ರೆಡೀಯಾಗಿ ಸ್ವಾಮೀ! ಆಫೀಸ್ ವ್ಯಾನು ಹೊರಟೋಗತ್ತೇ.." ಅಲಾರ್ಮ್ ಮೊಳಿದಷ್ಟು ಖಚಿತವಾಗಿ, ಕರ್ಕಶವಾಗಿ ಕೇಳಿಬಂತು ಸುಶೀಲನ ಧ್ವನಿ. ಮತ್ತೊಮ್ಮೆ ತಲೆ ಬಾಚಿ ರೂಮ್ ಹೊರಗೆ ಬಂದ ಮಹದೇವ್. ಕಾಫೀ ಗ್ಲಾಸ್ ಕೈಯಲ್ಲಿ ಹಿಡಿದು ನಿಂತ ತನ್ನ ಪತ್ನಿಯನ್ನ ಒಮ್ಮೆ ನೋಡಿದ. ತನಗೂ, ಅವಳಿಗೂ ಮಧ್ಯ ಐದೇ ವರ್ಷ ವ್ಯತ್ಯಾಸ. ಆದರೇ ಅವಳ ತಲೆ ತನಗಿಂತಾ ಬಿಳಿಯಾಗಿ, ಹಣ್ಣಾಗಿ ಹೋಗಿದೆ. ದೇಹವೂ ತೂಕ ಜಾಸ್ತಿ ಯಾಗಿದೆ. ಇದು ಅವಳಿಗೆ ಗೊತ್ತಿದೋ ಇಲ್ಲೋ! ಅವಳೆಂದನ್ನಾ ತನ್ನ ಹಾಗೆ ಯೋಚಿಸಿರುತ್ತಾಳಾ?
"ಏನ್ರೀ ಸ್ವಾಮೀ! ಟೈಮೆಷ್ಟಾಯಿತೋ ನೋಡೀರಾ?" - ತನ್ನ ಕಣ್ಣು, ಗಡಿಯಾರದ ಮುಳ್ಳು ಒಂದೇ ಸಮ ಯೆನ್ನುವರೀತಿ ಕಿರಿಚಿದಳು ಸುಶೀಲ. ಕಾಫೀ ಕುಡಿದು, ಬ್ಯಾಗ್ ಹೆಗೆಲಿಗೆ ಏರಿಸಿ ಕಾಲು ಹೊರಯಿಡಿಲಿಕ್ಕೆ ಮುಂದಾದ ಮಹದೇವ್. "ರೀ!" ಅಂದಳು ಸುಶೀಲ. ನಗುತಾ ಸುಶೀಲಳ ಕೆನ್ನೆಯೆ ಸವರಿದ ಮಹದೇವ್ .
***********
"ಸುರೇಶ್ ಎಲ್ಲಿ?" ವ್ಯಾನ್ ಹತ್ತಿದ ತಕ್ಷಣ ಕೇಳಿದ ಮಹದೇವ್.
"ಮಗಳಿಗೆ ಬ್ರೆಯಿನ್ ಹೆಮರೇಜ್ ಆಗಿದೆ.." ನಿರ್ವಿಕಾರವಾಗಿ ಹೇಳಿದ ಮುರಳಿ.
ಅವನಿಗೆ ತಿಳಿಯಧಾಂಗೆ ನಾಡಿ ಬಡಿತ ಬೆಳೆಯಿತು ಮಹದೇವ್ ಗೆ. "ಏನು? ಏನೆಂದಿ? ಏನಾಯಿತಿ?" ಎಂದು ಉದ್ಗಾರಮಾಡಿ ಕೇಳಿದ.
"ನನಗೆ ವಿವರಗೊತ್ತಿಲ್ಲ. ಪಿಕಪ್ ಮಾಡ್ಲಿಕ್ಕೆ ಹೋದ್ರೆ ಡ್ರೈವರ್ ಗೆ ಯಾರೋ ಬಂದು ಹೇಳಿದ್ರಂತ"..ಮತ್ತೆ ನಿರ್ವಿಕಾರವಾಗಿ ನುಡಿದ ಮುರಳಿ.
"ಏನಾಯ್ತು ಮಂಜು?" ಭಯದಿಂದ ಕೂಡಿದ ಕಂಠದಿಂದ ಕೇಳಿದ ಮಹದೇವ್ .
"ಆ ಬಂದವು ಡೀಟೈಲ್ಸ್ ಕೊಟ್ಟಿಲ್ಲಾ ಸಾರ್. ಸುಮ್ಮಗೆ ಹೀಗಂತ ಹೇಳಿಹೋದ್ರು. ನಿಜ ಹೇಳ್ಬೇಕೆಂದ್ರೇ ಸಾರು ಆ ಬಂದವ್ರ ಕಣ್ತುಂಬಾ ನೀರೈತೆ. ಪಾಪ ಸುರೇಶ್ ಸಾರ್ ಇನ್ಯಾಂಗಿರಬೇಕು" ಅಂದ ಡ್ರೈವರ್ ಮಂಜು.
ವ್ಯಾನ್ ಇಳಿದಿಬಿಡಬೇಕೆಂದು ಬಲವಾಗಿ ಅಂದುಕೊಂಡ. ಆದರೇ ಆಫೀಸಲ್ಲಿ ಆಡಿಟಿಂಗ್. ಖುದ್ದು ಎಂ.ಡಿ. ಸಾಹೆಬರು ಕೊಟ್ಟ ಕೆಲಸ. ಹೋಗಲೇಬೇಕು. "ಇದೇ ನಿನ್ನ ಮಗಳಿಗೆ ಆದರೇ, ಹೀಗೇ ಕೂಡ್ತಿಯಾ ಮಹದೇವ್" ಎಂದಿತು ಒಳಗಿನ ಅಂತರಾತ್ಮ. "ಇದೇ ನಿನ್ನ ಜೊತೆ ಸಮಸ್ಯೆ. ಎಲ್ಲ ವಿಷಯದಲ್ಲೂ ಅನ್ವಯ, ವ್ಯತಿರೇಕಗಳನ್ನ ಹುಡುಕುತ್ತಾನೆ ಇರ್ತಿ" ಅಂತ ಬೇಸತ್ತುಕೊಂಡ ಮಹದೇವ್. ವ್ಯಾನ್ ಕಿಡಿಕಿ ತೆಗದ ತಕ್ಷಣವೇ "ಛುಳ್" ಎಂದು ಬಂದು ಬಡಿತು ಚಳಿಗಾಳಿ. ತನ್ನ ಅಂತರಾತ್ಮ ಕೆನ್ನೆಗೆ ಬಾರಿಸುತು ಅಂತ ಅಂದುಕೊಂಡ ಮಹದೇವ್.
***********
ಎಫ್.ಎಮ್. ರೇಡಿಯೋ ಹಳೆಯ ಹಿಂದಿ ಚಿತ್ರಗೀತೆ ಒಂದಕ್ಕೆ ಅಸಹ್ಯವಾದ ಒಂದು ರೀಮಿಕ್ಸ್ ನು ಬೊಗಳುತ್ತಾ ಇದೆ. ಪಕ್ಕದಲ್ಲೇ ಕೂತ ಮುರಳಿ ತಲೆಯಾಡಿಸುತ್ತಾ ಆ ಹಾಡನ್ನ ಗುನುಗುಡ್ತಾಯಿದ್ದಾನೆ. ಆಶ್ಚರ್ಯವಾಯಿತು ಮಹದೇವ್ ಗೆ.
ಮುಂದಿನ ಸೀಟಲ್ಲಿ ಕೂತ ಭಾನುಮತಿ, ಷರೀನ್ ಗಳಾಬಿಳಿ ಏನೋ ಮಾತಾಡ್ತಾನೆ ಇದ್ದಾರೆ. ಷರೀನ್ ಹಾಕಿಕೊಂಡ ಪೋನೀ ಟೈಲ್, ಆಕೆ ತಲೆ ಆಡಿಸಿದಂತೇ ಎಡ, ಬಲ ಎನ್ನುತ್ತಾನೆ ಇದೆ. ಅವಳು ೨೦ ಹರಿಯದ ಹುಡಿಗಿ. ಸಹಜವಾದ ಕಪ್ಪುಗೂದಲು. ಭಾನುಮತಿಯೋ ತನ್ನ ವಯಸಿನವಳೇ. ಕೂದಲಿಗೆ ಬಣ್ಣ ಬಡಿದಿದ್ದಾಳೆ. ಹಾಗಾಗಿ ಕಪ್ಪಾಗಿ ಕಾಣ್ತಾಯಿವೆ. ನಾಳೆನಿಂದ ತನ್ನ ಕೂದಲಿಗೂ ಬಣ್ನದ ವೇಷಧಾರಣೆ ಮಾಡಿಸಬೇಕೆಂದು ತೀರ್ಮಾನ ಮಾಡಿದ ಮಹದೇವ್.
ಸಿಗ್ನಲ್ ಬಳಿ ವ್ಯಾನ್ ನಿಲ್ಲಿತು. ಜೀಬ್ರಾ ಕ್ರಾಸಿಂಗ್ ನಲ್ಲಿ ರೋಡ್ ದಾಟುತ್ತಾ ಶಾಲಾ ಮಕ್ಕಳು. ಹೆಣ್ಣು ಮಕ್ಕಳು. ಚಟಕ್ಕಂತ ಸುರೇಶ್ ಮಗಳಿನ ನೆನೆಪು ಬಂತು ಮಹದೇವ್ ಗೆ.
ಅವಳ ಹೆಸರು "ಸ್ವಪ್ನರಾಗ ಲೀನ". ಮಹದೇವೇ ಕೊಟ್ಟ ಹೆಸರು ಅದು. ಸಾಹಿತ್ಯದಲ್ಲಿ ಅಪಾರವಾದ ಇಷ್ಟವಿರುವು ಸುರೇಶ್ ಹಿಂದಲೇ ತನ್ನ ಮಗಳಿಗೆ ಅದೇ ಹೆಸರನ್ನಿಟ್ಟ. ಅವಳೀಗ ಆರು ವರ್ಷದ ಹುಡಿಗಿ. ಓದಿನಲ್ಲಿ ಅಷ್ಟೆಕ್ಕಷ್ತೇ ಆದರೂ, ಹಾಡಿನಲ್ಲಿ ಕೋಗಿಲಿಯೇ ಸರಿ.
"ಬೊಯ್ ಬೊಯ್" ಎಂದು ಬೊಗಳಿಲಿಕ್ಕೆ ಷುರುಮಾಡಿದವು ಹಾರನ್ಗಳು. ಕೆಂಪು ಬಣ್ನದಿಂದ ಹಸಿರು ಬಣ್ಣಕ್ಕೆ ತಿರುಗಿದೆ ಟ್ರಾಫಿಕ್ ದೀಪ. ಮಹದೇವ್ ನ ಯೋಚನೆ ಕಡೆದು ಹೋಯಿತು.
***********
ಮೊಬೈಲ್ ಕೂಗುತ್ತಿದ್ದರೇ, ಪರಧ್ಯಾನದಲ್ಲಿ ತೆಗೆದು "ಹೆಲೋ" ಅಂದ ಮಹದೇವ್ ಐದು ನಿಮುಷಗಳಲ್ಲಿ ಎಮ್.ಡಿ ಕೇಬಿನಲ್ಲಿ ನಿಂತ. "Is it? That girl passed away? Very sad to hear the news. You can go Mahadev. Please convey my condolence too." - ಅಧಿಕಾರಿಕವಾಗಿ ಸಂತಾಪವನ್ನ ಪ್ರಕಟಿಸಿ ಮತ್ತೆ ಫೈಲ್ ನಲ್ಲಿ ತಲೆಹಾಕಿಬಿಟ್ಟ ಎಮ್.ಡಿ.
"ಥಾಂಕ್ಯೂ ಸರ್" ಅಂದು ಹೊರೆಗೆಬಿದ್ದ ಮಹದೇವ್.
************
ಸುರೇಶ್ ಮನೆ ಹತ್ತಿರ ಬರುತ್ತಿದಂತೇ ಎದೆ ಬಡಿತ ಜಾಸ್ತಿ ಆಯಿತು ಮಹದೇವ್ ಗೆ. ಸಾವು ಅಂದರೇನೋ ಗೊತ್ತಿಲ್ಲದ ಕಂದಮ್ಮ ಅಲ್ಲ ಆತ. ಆದರೇ ಇಲ್ಲಿ ಹೋಗಿದ್ದು ಒಂದು ಕಂದಮ್ಮ. ಇದು ಆತ ನೋಡದ ದೃಶ್ಯ. ಕಣ್ಣೆದುರಿಗೆ ಹುಟ್ಟಿ, ಹಾಡಿ, ನಲಿದು, ಕುಪ್ಪಳಿಸಿದ ಒಂದು ಪುಟಾಣಿಯ ಅದೃಶ್ಯ.
ಕಾಲು ಒಳಗೆ ಇಟ್ಟ ಕೂಡಲೇ ಓಡಿ ಬಂದು ಗಟ್ಟಿಯಾಗಿ ಅಪ್ಪಿಕೊಂಡ ಸುರೇಶ್. ಅವನ ದುಃಖವನ್ನ ತಡಿಲಿಕ್ಕೆ ಅಶಕ್ತನಾದ ಮಹದೇವ್.
ಮಹದೇವ್ ನ ಎದೆಯ ಮೇಲೆ ತಲೆ ಇಟ್ಟು ಏನೇನೋ ಹೇಳ್ತಾಯಿದ್ದಾನೆ ಸುರೇಶ್. ಆದರೇ ಮಹದೇವ್ ನ ಕಣ್ಣುಗಳು ಸ್ವಪ್ನರಾಗಲೀನಳ ಮುಖದ ಮೇಲೆ ನಿಂತುಹೋಗಿವೆ. ಈಗೀಗೆ ನಿದ್ದೆಯೊಳೆಗೆ ಜಾರಿದಂತೆ ಇದೆ ಆ ಮುಖ. ಹಾಡುತ್ತಾ ಇದ್ದಾಳೇನೋ ಅನ್ನುವಹಾಗೆ ಸ್ವಲ್ಪ ತೆರೆದುಕೊಂಡಿವೆ ತುಟಿಗಳು. ಫ್ಯಾನ್ ಗಾಳಿಗೆ ಹಣೆಯ ಮೇಲೆ ನೃತ್ಯಮಾಡುತ್ತಾ ಆ ಗುಂಗುರು ಕೂದಲು. ಕಪ್ಪುಬಣ್ನದ ಗುಂಗುರು ಗುಂಗುರು ಕೂದಲು. ಚಟ್ ಅಂತ ಕಣ್ಣು ಮುಚ್ಚಿಕೊಂಡ ಮಹದೇವ್.
ಶಾಶ್ವತಾಶಾಶ್ವತ ಸ್ಥಾಯಿ ಭಾವಗಳ ಸುಳಿ ಆತನ ಎದೆಯಲ್ಲಿ ಎದ್ದಿತು. ಅಸ್ತಿ, ನಾಸ್ತಿ ಯೆನ್ನುವ ಪ್ರಶ್ನೆಗಳ ಶರಪರಂಪರೆ ಆತನ ಬುದ್ಧಿಯನ್ನು ಭೇದಿಸ ತೊಡಗಿತು. ಜ್ಣಾತಾಜ್ಣಾತ ತಾತ್ವಿಕ ಚಿಂತನೆ ಯಾವುದೋ ಅರಳತೊಡಗಿತು. ಈಗ ಮಹದೇವ್ ಮುಖ ನಿರ್ಮಲವಾಗಿದೆ. ನಿಶ್ಚಲವಾಗಿದೆ.
*************
ಬುಧ್ಢನಾಗ ಬೇಕಿದ್ದರೆ ಬೋಧಿವೃಕ್ಷವೇ ಬೇಕಿಲ್ಲ!
**************
ಪ್ರತಿಕ್ರಿಯೆ (4)