ಸಾಮಾನ್ಯಾವಾಗಿ ಯಾರಾದರೂ ಫೋನ್ ಮಾಡಿದರೆ ಹಲೋ ಎನ್ನುವುದೋ ಅಥವ ಎಸ್ ಎನ್ನುವುದೋ ವಾಡಿಕೆ ಅಲ್ಲವೇ?
ಆದರೆ ಉತ್ತರ ಭಾರತದ ವಿವಿಗಳಿಗೆ ಜೊತೆಗೆಯಾವುದೇ ಸಂಸ್ಥೆಗಳಿಗೆ ಕರೆ ಮಾಡಿದರೆ ಸಿಗುವ ಉತ್ತರ
"ಹಾ ಜಿ, ಬತಾಯಿಯೇ"
ಜೊತೆಗೆ ನಮಗೆ ಹಿಂದಿ ಗೊತ್ತಿರಲೇ ಬೇಕೆನ್ನುವ ಅಲಿಖಿತ ನಿಯಮ ಅವರದು.
ನಾವೆಷ್ಗ್ಟೇ ಆಂಗ್ಲದಲ್ಲಿ ಮಾತಾಡಿದರೂ ಅವರು ಮುಂದುವರೆಸುವುದು ಹಿಂದಿಯಲ್ಲೇ.
ನಮ್ಮ ಮನೆಯವರು ತಮಿಳು ನಾಡಿನಲ್ಲಿ ಓದಿದವರು ಹಿಂದಿಯ ಅರಿವು ಅಷ್ಟಕ್ಕಷ್ಟೇ.
ನೆನ್ನೆ ಯಾವುದೋ ಕೆಲಸಕ್ಕೋಸ್ಕ್ಲರ ಸುಮಾರು ಮೂರ್ನಾಲ್ಕು ವಿವಿಗಳ ಜೊತೆ ಮಾತಾಡಿದ್ದಾರೆ ಸಿಕ್ಕಿದ್ದು ಹಿಂದಿಯಲ್ಲೇ ಉತ್ತರ. ಇವರು ಉತ್ತರಿಸಲಾಗದೆ ಲೈನ್ ಕಟ್ ಮಾಡಿದ್ದರು. ನಂತರ ಬಂದು ನಾನು ಪರಿಹರಿಸಿದೆ.
ಹೀಗೆ ನಾನು ತಮಿಳುನಾಡಿನ ವಿವಿಗಳಿಗೆ ಫೋನ್ ಮಾಡಿದಾಗಲೆಲ್ಲಾ ತಮಿಳಿನಲ್ಲಿಯೇ ಉತ್ತರ ಬರುವುದು. ಇಂಗ್ಲೀಷ್ ಊಹೂ,
ಕೇವಲ ವಿಸಿಯ ಮಟ್ಟದಲ್ಲಿ ಮಾತ್ರ ಇಂಗ್ಲೀಷ್ .
ಕೇಳಿದರೆ ತಮಿಳು ನಾಡ್ ಸರ್ಟಿಫಿಕೇಟ್ಸ್ ವೇಣು ಸ್ಟಡಿ ಸೆಂಟರ್ ವೇಣು. ತಮಿಳ್ ಮಟ್ಟ ವೇಂಡಾಮಾ? ಎನ್ನುತ್ತಾ ನಗುತ್ತಾರೆ.
ತಮಿಳು ಗೊತ್ತಿಲ್ಲದ ನಾನು ಒದ್ದಾಡಬೇಕು
ಆದರೆ ನಮ್ಮ ಕೆ ಎಸ್ ಒ ವಿವಿ ಗೆ ಅಥವ ಬೆಂಗಳೂರು ವಿವಿಗೆ ಫೋನ್ ಮಾಡಿದರೆ ಮಾತ್ರ ಉತ್ತರ ಇಂಗ್ಲೀಷಿನಲ್ಲಿ ಬರುತ್ತದೆ. ನಾವೇನಾದರೂಕನ್ನಡದಲ್ಲಿ ಮಾತಾಡಿದರೆಮಾತ್ರ ಕನ್ನಡದಲ್ಲಿ ಮುಂದುವರೆಸುತ್ತಾರೆ. ಅಷ್ಟೇಕೆ ನಾನೂ ನಮ್ಮ ಸಂಸ್ಥ್ಗೆಗೆ ಯಾರಾದರೂ ಫೋನ್ ಮಾಡಿದರೆ ಅವರ ಭಾಷೆಯಲ್ಲಿಯೇ ಉತ್ತರಿಸಲು ಪ್ರಯತ್ನಿಸುತ್ತೇನೆ.
ಅವರ ಹಾಗೆ ಖಡಕ್ಕಾಗಿ ಕನ್ನಡದಲ್ಲಿ ಮಾತ್ರ ಮಾತಾಡಿ ಎನ್ನುವ ಹೇರಿಕೆಯನ್ನು ಏಕೆ ಹೇರಲಾಗುತ್ತಿಲ್ಲ ?
ಅದೇ ನನಗೆ ಅನುಮಾನ ಅವರ್ಯಾಕೆ ಹಾಗೆ ನಾವ್ಯಾಕೆ ಹೀಗೆ ಬಹುಶ ಉದಾರತೆಯ ಮಟ್ಟ ಹೆಚ್ಚು ನಮ್ಮಲ್ಲಿಯೇ ಅನ್ನಿಸುತದೆ
ಪ್ರತಿಕ್ರಿಯೆ (5)