!!!!!!!!!!!!!!! ದಾಸವರೇಣ್ಯರಲ್ಲಿ ಕ್ಷಮೆಯಿರಲಿ  !!!!

 ದಾರಿ ಯಾವುದಯ್ಯ ಮನಕೆ ದಾರಿ ಯಾವುದಯ್ಯ

 ಅರಿಯದ ದಾರಿ,

ತಿಳಿಯದ ದಾರಿ

ಕವಲು ಇರದ ಕಾಲುದಾರಿ

                             ದಾರಿ ...........

ಆದಿ-ಅಂತ್ಯಯಿರದ ದಾರಿ

ದ್ವೇಷ-ಹಗೆಯ ಮುಳ್ಳಿನ ದಾರಿ

ಸವೆದು ಸಾಗುವ ಕಾಣದ ದಾರಿ

                             ದಾರಿ................        

ಕೆಚ್ಚು ಭಾವದ,

ಹುಚ್ಚು ಮನಸಿದು

ಈರ್ಷೆ-ಮೋಸದ  ದಾಳ ಅರಿಯದು 

                             ದಾರಿ................ 

ದೂರ ಕಾಣುವ ದಿಕ್ಕಿನೆಡೆಗೆ

ನಡೆದು ಸಿಗದ ಸೂರಿನೆಡೆಗೆ

ದುಃಖ-ದರಿಯು ಇರುವ ಮನಕೆ

                             ದಾರಿ................ 

ಮರೆತು ಹೋದನೆ ಮನುಜ ಧರ್ಮ

ಭಕ್ತಿ-ಭಯದ ಪ್ರೀತಿ ಮರ್ಮ

ಸತ್ಯ ಇರುವ,  ಕಪಟ ಇರದ

 

       ದಾರಿ ಯಾವುದಯ್ಯ, ದೇವರೇ

              ಅಂತಹ ದಾರಿ ತೋರೆಯಾ