ಬಿಲ್ಲಿನಿಂದ ಹೊರಟ ಬಾಣ ನಾನು,
ರಾವಣ ನ ಎದೆ ಬಗೆಯಲು ಹೊರಟ ,
ರಾಮ-ಬಾಣ ಆಗಲು ಅಲ್ಲ
ಮತ್ಸ್ಯ ಯಂತ್ರವ ಭೇದಿಸಲು ಹೊರಟ,
ಆರ್ಜುನ ಬಾಣ ಆಗಲು ಅಲ್ಲ ,
ಧರೆಯ ಬಗೆದು ಗಂಗೆ ಬರಿಸಿ,
ಭೀಷ್ಮನ ದಾಹ ತಣಿಸಲು ಅಲ್ಲ.
ಯುದ್ದಗಳಲ್ಲಿ ಎದುರಾಳಿಯ ಜೀವವನ್ನು
ಅರಸುತ್ತ ಹೊರಟ ಬಾಣ ನಾನಲ್ಲ,
ಕನ್ನಡ ಬಂದರು ಮಾತನಾಡದ,
ಭಂಡ ಮನುಜರ ನಿದ್ದೆಗೆಡಿಸಲು,
ಕನ್ನಡವನ್ನು ಕಲಿಯದೆ, ಇಲ್ಲಿ ಬಾಳಬಯಸುವ
ದುರುಳರ,ಕನಸಲ್ಲಿ ಕಾಡಲು
ಕನ್ನಡ-ಕಂದನ ಮುಗುಳ್ನಗೆಯನು ಹರಡಲು
ಬಿಲ್ಲಿಂದ ಹೊರಟ ಬಾಣ ನಾನು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!