ಇನಿಯಾ

ಗೋಡೆಗಳೇಕೆ ಏಳುತಿವೆ ನಿನ್ನ ನನ್ನ ನಡುವಲ್ಲಿ?

ಇದ್ದ ಗೋಡೆಯನ್ನೊದ್ದು ಒಂದಾದವರಲ್ಲವೇ ನಾವು?

ಇನಿಯಾ

ಮಧುರ ಮಾತುಗಳೇಕೆ ಅಪೂರ್ಣಗೊಳ್ಳುತ್ತಿವೆ?

ಮಾತಿಗೆ ಕಿವಿಯಾಗಿಸಿ ಕಾದವರಲ್ಲವೇ ನಾವು?

ಇನಿಯಾ

ಹುಣ್ಣಿಮೆಯ ಬೆಳಕೇಕೆ ಅಸಹನೀಯವಾಗುತಿವೆ?

ಬಿಸಿಲಲ್ಲೂ ತಂಪ ಕಂಡವರಲ್ಲವೇ ನಾವು?

 

ಇನಿಯಾ?

ಕಂಗಳೇಕೆ  ದೃಷ್ಟಿ  ತಪ್ಪಿಸುತ್ತಿವೆ?

ಕಂಗಳ ಮಿಲನಕೆ ಸಂತಸಿಸಿದವರಲ್ಲವೇ ನಾವು?

ಇನಿಯಾ

ಬಾಳ ಪಯಣದಲ್ಲಿ ಏರು ಪೇರು ಮಾತು ಮೌನ

ಜಗಳ ,ಕದನಗಳು  ಸಹಜವಲ್ಲವೇ ?

ಈ ಮೌನ  ಅಸಹನೆ ಕಣ್ಣೀರಾಗಿ ಹರಿಯಬೇಕೇಕೆ?

ಹರಿದು ಬಿಡಲಿ ಒಂದು ನಗೆ  ನಿನ್ನಲ್ಲೂ ಕಂಡಿತೇ ಆ ನಗೆ

ಕಣ್ಣಿಂದ ಹರಿದದ್ದು ಮಿಂಚಾಗಿ ಮನ ಕರಗಿ ಸಂತಸದ ಬುಗ್ಗೆ