ಇದು ಯಾರ ಸುಗ್ಗಿ ? ಇದು ಯಾರ ಸುಗ್ಗಿ ?
ವರುಣನ ಆರ್ಭಟಕ್ಕೆ ಬದುಕು ಕೊಚ್ಚಿ ಹೋದವನದೆಂಥ ಸುಗ್ಗಿ ?
ಯೋಜನೆಗಳಿಗೆ ಭೂಮಿ ಕಳೆದುಕೊಂಡವನದೆಂಥ ಸುಗ್ಗಿ ?
ಭೂಮಿ ಕಳೆದುಕೊಳ್ಳುವ ಭಯದಲ್ಲಿರುವನದೆಂಥ ಸುಗ್ಗಿ ?
ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಕೈ ಸುಟ್ಟುಕೊಂಡವನದೆಂಥ ಸುಗ್ಗಿ ?
ಉಳುವವರಿಲ್ಲದೆ ಮಲಯಾಳಿಗಳಿಗೆ ಭೂಮಿ ಗುತ್ತಿಗೆ ಕೊಟ್ಟವನದೆಂಥ ಸುಗ್ಗಿ ?
ಅತಿವೃಷ್ಟಿ ಪರಿಹಾರದಲ್ಲಿ ತಿಂದು ತೇಗಿದವನಿಗಿದು ಸುಗ್ಗಿ !
ಯೋಜನೆ ಹೆಸರಿನಲ್ಲಿ ಜಮೀನು ಸ್ವಾದೀನ ಪಡಿಸಿಕೊಂಡವನಿಗಿದು ಸುಗ್ಗಿ !
ಹಣಕ್ಕಾಗಿ ಖಾಸಿಗಿಯವರಿಗೆ ಕೆಲಸ ಮಾಡುತ್ತಿರುವ ಸರಕಾರಿಯವರಿಗಿದು ಸುಗ್ಗಿ !
ಗ್ರಹಣವನ್ನು ಗ್ರ+ಹಣ ಎಂದು ಓದಿಕೊಂಡ ಜೋತಿಷಿಗಿದು (ಅರ್ಚಕನಿಗಿದು) ಸುಗ್ಗಿ !
ಗುಂಪುಗಾರಿಕೆ ಮಾಡಿ, ಬೆದರಿಕೆಯೋಡ್ಡಿ ಮಂತ್ರಿಯಾದವನಿಗಿದು ಸುಗ್ಗಿ !
ಮುಂದಿನ ವರ್ಷವಾದರೂ ರೈತನಿಗೆ ನಿಜವಾದ ಅರ್ಥದಲ್ಲಿ ಸುಗ್ಗಿ ಬರಲೆಂದು ಆಶಿಸುತ್ತ -- ನಿಮಗೆಲ್ಲ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ರಾಜರ ಆಡಳಿತದಲ್ಲಿ ರಿಸೆಶನ್...!! -ಭಾಗ 2
ರಾಜರ ಆಡಳಿತದಲ್ಲಿ ರಿಸೆಶನ್...!! -ಭಾಗ 1
ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!