ಮೈಲ್ ಬಾಕ್ಸ್ ನೋಡಿದರೆ ಫುಲ್. ಅಲ್ಲೊಂದು ಜಿ.ಮೃತ್ಯುಂಜಯ ರವರ ಮೈಲ್ ಒಂದು ಬ್ಲಾಗ್ ಗೆ ಸರಕಾಗಿತ್ತು. ಅದನ್ನು ನೇರವಾಗಿ ನಿಮಗೆ- ನಿನ್ನ ಬ್ಲಾಗಿನ 'ಹಾರುತ ದೂರ ದೂರ....' ಬರಹವನ್ನು ಓದಿ ನನ್ನ ಮನಸ್ಸು ೧೯೬೦ ನೇ ಇಸವಿಗೆ ಹೋಗಿ ಆಗ ನಾನು ಇದೇ ವಿಷಯದ ಮೇಲೆ ಬರೆದಿದ್ದ ಒಂದು ಕವನವನ್ನು ನೆನಪಿಸಿಕೊಂಡಿತು. ಅದರ ಬಗ್ಗೆ ಎರಡು ಮಾತು ಹೇಳಿದರೆ ನಿನಗೆ ಬೇಸರವಾಗದೆಂದುಕೊಂಡಿದ್ದೇನೆ.ಕಾಕೋಳು ರಾಘವೇಂದ್ರ ಅವರ ನೇತೃತ್ವದ ಬೆಂಗಳೂರಿನ ಸರಸ್ವತಿ ಕಲಾನಿಕೇತನ ಎಂಬ ಸಂಸ್ಥೆ ಅಖಿಲ ಕರ್ನಾಟಕ ಕವನ ಸ್ಪರ್ಧೆಯನ್ನು ಏರ್ಪಡಿಸಿತ್ತು. ಅದಕ್ಕೆ ನಾನು 'ಭ್ರಮರ ಪ್ರಣಯ' ಎಂಬ ಕವನವನ್ನು ಕಳಿಸಿದೆ. ಸ್ವಲ್ಪ ಸಮಯದ ನಂತರ, ನನ್ನ ಕವನಕ್ಕೆ ಮೊದಲ ಬಹುಮಾನ ಬಂದಿದೆಯೆಂದೂ, ಬಹುಮಾನ ವಿತರಣೆ ಸಮಾರಂಭವನ್ನು ಏರ್ಪಡಿಸಿರುವುದಾಗಿಯೂ, ಪು.ತಿ.ನ. ಅವರ ಹಸ್ತದಿಂದ ಬಹುಮಾನವನ್ನು ಸ್ವೀಕರಿಸಲು ಆ ಸಮಾರಂಭಕ್ಕೆ ಬೆಂಗಳೂರಿಗೆ ಬರಬೇಕಾಗಿಯೂ ಅವರಿಂದ ಪತ್ರ ಬಂತು. ಆಬ್ವಿಯಸ್ ಕಾರಣದಿಂದ ಅದಕ್ಕೆ ನಾನು ಹೋಗಲಿಲ್ಲ. (ಹೋಗಿದ್ದರೆ, ೪ಅಡಿ ೪ಅಂಗುಲ ಎತ್ತರದ, ೪೫ ಕೇಜಿ ತೂಗುತ್ತಿದ್ದ, ಮೀಸೆ ಬರದಿದ್ದ ನನ್ನನ್ನು ನೋಡಿ ಅವರು ಇದು ಕೃತಿಚೌರ್ಯದ ಕೇಸು ಎಂದುಕೊಳ್ಳುತ್ತಿದ್ದರೇನೋ!) ಸಮಾರಂಭದ ನಂತರ ಅವರಿಂದ ಮತ್ತೆ ಪತ್ರ ಬಂತು. ಪು.ತಿ.ನ. ಅವರು ಕವನವನ್ನು ಬಹಳವಾಗಿ ಮೆಚ್ಚಿಕೊಂಡರೆಂದೂ, ಅದನ್ನು ತುಂಬ ಶ್ಲಾಘಿಸಿ ಮಾತಾಡಿದರೆಂದೂ ಅದರಲ್ಲಿ ತಿಳಿಸಿದ್ದರು. ನಾಡಿನ ಶ್ರೇಷ್ಠ ಕವಿಯೋರ್ವರಿಂದ ಪ್ರಶಂಸಿಸಲ್ಪಟ್ಟಿದ್ದ ಆ ಕವನವನ್ನು ಈ ಕೆಳಗೆ ಬರೆದಿದ್ದೇನೆ.
ಭ್ರಮರಪ್ರಣಯ
ನೀಲದಾಳದಂತರಾಳ
ಪ್ರಕೃತಿಯೆಸೆದಮೋಹಜಾಲ
ಭೋಗಕೆಂದುನೀಲನೂಲ
ನೆಯ್ದುರಚಿಸಿದಾದುಕೂಲ.
ರಾಣಿಯೊಂದುಮುಂದಕೆ
ದುಂಬಿವಿಂಡುಹಿಂದಕೆ.
ಮೇಲೆಮೇಲೆಮೇಲೆಹಾರಿ
ಬಂದುಎನ್ನಬಳಿಯಸೇರಿ
ಶಕ್ತರಲ್ಲದವರದಾರಿ
ಸುಗಮವಲ್ಲಹಿಂದೆಸಾರಿ
ಎಂಬರಾಣಿಮುಂದಕೆ
ದುಂಬಿಯೊಂದುಹಿಂದಕೆ.
ಮೇಲೆಮೇಲೆಮೇಲೆಹಾರಿ
ಬಂದೆಎನ್ನಬಳಿಯಸೇರಿ
ನೀನೆಆಣ್ಮಓ! ವಿಹಾರಿ
ವಿರಮಿಸೆನ್ನತೋಳಸೇರಿ
ಎಂದುರಾಣಿಯುಲಿಯಿತು
ಭ್ರಮರದಾತ್ಮನಲಿಯಿತು.
ಪ್ರಿಯೆಯಪ್ರೇಮಸತ್ಯಅಮರ
ಮಧುರದಧರನಿತ್ಯರುಚಿರ
ಜಗದಸೊಗದಬಾಳ್ವೆಮಧುರ
ಎಂದುನಕ್ಕಿತಾಗಭ್ರಮರ.
ಕಾಲದೂತಫಕ್ಕನೆ
ಅದರಹಿಂದೆನಕ್ಕನೆ?
ಪ್ರಕೃತಿಯಾಟಅದಕೆಅರಿದು
ಬಂಧಸಡಿಲಲುದರಬಿರಿದು
ಕರುಳುಕಿತ್ತುಹೊರಗೆಹರಿದು
ಚಣದಿಶಾಂತವಾಯ್ತುಮೊರೆದು.
ರಾಣಿಭ್ರಮರಯೋಗವು
ಮಾದ್ರಿಪಾಂಡುಭೋಗವು.
ನೀಲದಾಳದಂತರಾಳ
ಕಾಲನೆಸೆದಮೃತ್ಯುಜಾಲ
ಬೀಸಿಮೊದಲುಮೋಹಜಾಲ
ಸೊಗದಕಾಲಕಿರಿವಶೂಲ!
ಈಗರಾಣಿಗೂಡಿಗೆ
ಗಂಡುಯಮನಬೀಡಿಗೆ!
ಪ್ರತಿಕ್ರಿಯೆ (2)