ಲಿನಕ್ಸಿನಲ್ಲಿ ಹಲವು ರೆಂಡರಿಂಗ್ ಇಂಜಿನುಗಳಿವೆ. ಅದರಲ್ಲಿ 'ಪ್ಯಾಂಗೋ' ಕೂಡ ಒಂದು. ಲಿನಕ್ಸ್ ಬಳಸುವವರಿಗೆ ಜಿಟಿಕೆ (GTK) ಮತ್ತು ಗ್ನೋಮ್ (GNOME) ಬಗ್ಗೆ ತಿಳಿದೇ ಇರುತ್ತದೆ. GNOME ಬಳಸುವ ರೆಂಡರಿಂಗ್ ಇಂಜಿನ್ - pango.
pango ಕನ್ನಡ ಅಕ್ಷರಗಳನ್ನು ಪರದೆಯ ಮೇಲೆ ಬಿತ್ತರಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಿತ್ತು. ಅದರಲ್ಲಿ ಸುಮಾರು ತಪ್ಪುಗಳು ಈಗ ಸರಿಪಡಿಸಿರುವರಾದರೂ ಒಂದೇ ಒಂದು ಬಗ್ ಉಳಿದುಕೊಂಡುಬಿಟ್ಟಿದೆ. ಲಿನಕ್ಸ್ ಬಳಸುವ ಸಂಪದ ಓದುಗರು ಯಾರಾದರೂ ಇದ್ದರೆ ಈ ಬಗ್ confirm ಮಾಡುವಲ್ಲಿ ಸಹಾಯ ಮಾಡಿ.
ಈ ಲೈಬ್ರರಿಯನ್ನು ಹ್ಯಾಕ್ ಮಾಡಿ ಗೊತ್ತಿರುವವರು ಯಾರಾದರೂ ಇದ್ದರೆ ಪ್ಯಾಚ್ ಸೇರಿಸಲೂ ಪ್ರಯತ್ನಿಸಬಹುದು. ಹೆಚ್ಚಿನ ಮಾಹಿತಿಗೆ ಈ ಪುಟ ನೋಡಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!