ಏಕೆ ಎಲ್ಲ ಮುಗಿದು ಹೋಗಿದೆ.?
ಏಕೀಗ ಹಾಲ್ಗಡಲ ಕಡೆಯುವುದಿಲ್ಲ
ಐರಾವತ, ಉಚ್ಛೈಶ್ವಗಳು ಹುಟ್ಟುವುದಿಲ್ಲ
ಅಮೃತ ಕುಂಭ ಮೇಲೆದ್ದು ಬರುತ್ತಿಲ್ಲ.
ಏಕೆ ಎಲ್ಲ ಮುಗಿದು ಹೋಗಿದೆ.
ಸ್ವರ್ಗದಲ್ಲೇಕೆ ಕುಮಾರ ಸಂಭವವಾಗುತ್ತಿಲ್ಲ
ದೇವಸುತ, ಪ್ರವಾದಿಗಳೇಕೆ ಬರುತ್ತಿಲ್ಲ
ಶಿವೆ ಪತಿ ಮಾತು ಧಿಕ್ಕರಿಸಿ ಅಗ್ನಿಗಾಹುತಿಯಾಗುತ್ತಿಲ್ಲ
ಏಕೆ ಎಲ್ಲ ಮುಗಿದು ಹೋಗಿದೆ.?
ಋಷಿಗಳ ತಪವೇಕೆ ಭಂಗವಾಗುತ್ತಿಲ್ಲ
ಶಕುಂತಲೆ ಭರತರೇಕೆ ಹುಟ್ಟುತ್ತಿಲ್ಲ
ಗಂಗೆಯಂತೆ ಇನ್ನೊಬ್ಬಳು ಬರುತ್ತಿಲ್ಲ
ಏಕೆ ಎಲ್ಲ ಮುಗಿದು ಹೋಗಿದೆ.?
ಸೂರ್ಯ ಚಂದ್ರ ವಂಶಗಳು
ಪುತ್ರಕಾಮೇಷ್ಟಿ ಯಾಗಗಳು
ಭೂ ಬಾರವಿಳಿಸಲು ದಶಾವತಾರಗಳು
ಏಕೆ ಎಲ್ಲ ಮುಗಿದು ಹೋಗಿದೆ.?
ಹರನಂ ನರನೊತ್ತಿದ -
ಗೊಡೆಯನೊಡೆದು ಭಕ್ತನ ಕಂಡ
ದೇವ ಕಂಬನಿ ಮಿಡಿದು ಸತಿಯ ಹುಡುಕಿದ
ಪಾರಿಜಾತವ ತಂದು ಸತಿಯ ಕೆಣಕಿದ
ಒಲಿಸಿದ ದೇವಕತೆಗಳು.
ಏಕೆಲ್ಲ ಮುಗಿದು ಹೋಗಿದೆ?.
ತಡಮಾಡಿದೆನೆ ? ನಾನು !
ಏಕೆಲ್ಲ ಮುಗಿದು ಹೋಗಿದೆ
ಬೆಂಗಳೂಲ್ಲಿ ಸಾವಿರಕ್ಕೆ ಸಿಗುತ್ತಿದ್ದ ಸೈಟುಗಳು
ಐದು ಹತ್ತು ಸಾವಿರಕೆ ಮನೆಗಳು
ಏಕೆಲ್ಲ ಮುಗಿದು ಹೋಗಿದೆ?.
ತಡಮಾಡಿದೆನೆ ? ನಾನು !
-ಗಾಯತ್ರಿ ರಘುಪತಿ ಬೆಂಗಳೂರು . ಬರೆದದ್ದು . ನಿಮಗಾಗಿ ಕಾಪಿ ಮಾಡಿ ಪೇಸ್ಟ್ ಮಾಡಿದ್ದು ನಾನು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಒಂದೇ ರುಚಿ ಒಂದೇ ಬಣ್ಣದ್ದು ಖಾಯಂ ಎಂದರೆ .......
"ಗೌರಿ" ಹೂವು
ನೀವು ಏನಾದರೂ ಅಂದುಕೊಳ್ಳಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!