ಅದೊಂದು ದೊಡ್ಡ ಪ್ರೊಜೆಕ್ಟ್. ಸುಮಾರು ೭೦ ಜನ ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ, ಹಗಲೂ ರಾತ್ರಿ, ತುಂಬಾನೆ ವಿಶೇಷ, ಮತ್ತು ಗೌಪ್ಯದ ಕಾರ್ಯವಾದುದರಿಂದ, ಅವರೆಲ್ಲರ ಮೇಲೆ ಕೆಲಸದ ಮತ್ತು ಅವರ ಬಾಸ್ನ ಮಾನಸಿಕ ಒತ್ತಡವೂ ಜಾಸ್ತಿಯೆ ಇದೆ. ಆದರೆ ಅವರೆಲ್ಲರೂ ಅವರ ಬಾಸ್ ನ ಮೇಲಿನ ಗೌರವಾದರದಿಂದಅಂತಹಾ ಮಾನಸಿಕ ಒತ್ತಡದ ನಡುವೆಯೂ ಕೆಲಸ ಬಿಟ್ಟು ಹೋಗುವ ಯೋಚನೆ ಕೂಡಾ ಮಾಡುತ್ತಿಲ್ಲ.
ಹೀಗಿರುವಾಗ ಒಂದು ದಿನ ಬೆಳಿಗ್ಗೆ ಒಬ್ಬ ವಿಜ್ಞಾನಿ ಬಾಸ್ ಬಳಿ ಬಂದು " ಸರ್ ನಾನು ಇವತ್ತು ನನ್ನ ಮಕ್ಕಳನ್ನು "ಪ್ರದರ್ಶಿನಿಗೆ" ಕರೆದು ಕೊಂಡು ಹೋಗುತ್ತೇನೆಂತ ಮಾತು ಕೊಟ್ಟು ಬಂದಿದೇನೆ ಅದಕ್ಕೇ ಮನೆಗೆ ೫:೩೦ ಕ್ಕೆ ಹೋಗ ಬೇಕಾಗಿದೆ" ಎಂದು ಕೇಳಿಕೊಂಡ. ಅದಕ್ಕೆ ಬಾಸ್ ಮನೆಗೆ ಬೇಗ ಹೋಗಲು ಆತನಿಗೆ ಒಪ್ಪಿಗೆ ಕೊಟ್ಟರು.
ಆತ ತನ್ನ ಕೆಲಸದಲ್ಲಿ ಮಗ್ನನಾದ. ಮಧ್ಯಾಹ್ನದ ಊಟ ಮುಗಿಸಿ ಪುನಃ ಆತ ಕೆಲ್ಸಕ್ಕೆ ಕುಳಿತ. ಆತ ತನ್ನ ಕೆಲ್ಸದಲ್ಲಿ ಎಷ್ಟು ಮಗ್ನನಾದ, ಎಂದರೆ ಅದು ಇನ್ನೇನು ಮುಗಿಯಿತು ಎನ್ನುವಾಗ ಆತ ತನ್ನ ಕೈಗಡಿಯಾರದ ಕಡೆ ಗಮನ ಹರಿಸಿದ, ಸಮಯ ೮:೩೦!! ಅಕಾಸ್ಮಾತ್ ಆಗ ಅವನಿಗೆ ಬೆಳಿಗ್ಗೆ ತಾನು ಮಕ್ಕಳಿಗೆ ಕೊಟ್ಟಿದ್ದ ಮಾತು ನೆನಪಿಗೆ ಬಂತು
ಆತ ತಲೆಯೆತ್ತಿ ತನ್ನ ಬಾಸ್ ನ ಕಡೆ ನೋಡುತ್ತಾನೆ, ಬೆಳಿಗ್ಗೆ ಯೇ ಆತ ಒಪ್ಪಿಗೆ ಕೊಟ್ಟಾಗಿತ್ತಲ್ಲ!! ಬಾಸ್ ಚೇಂಬರ್ ಖಾಲಿ !!.
ಮನದ ತುಂಬಾ ತಪ್ಪಿತಸ್ಥ ಬಾವನೆ ತುಂಬಿಕೊಂಡಾತ ಮನೆಗೆ ತಲುಪುತ್ತಾನೆ. ಮನೆಯಲ್ಲಿ ಹೆಂಡತಿಯೊಬ್ಬಳೇ ಹಾಲ್ ನಲ್ಲಿ ಯಾವುದೋ ಪೇಪರ್ ಓದುತ್ತಾ ಕುಳಿತ್ತಿದ್ದಳು, ಮಕ್ಕಳ ಸುಳಿವೇ ಇಲ್ಲ.
ಮಹಾ ಸ್ಫೋಟಕ ಸನ್ನಿವೇಶ, ಈಗಿನ ತನ್ನ ಒಂದು ತಪ್ಪು ಮಾತು ಕೂಡಾ ತಿರುಗುಬಾಣ ವಾಗ ಬಲ್ಲುದು ಎಂದರಿತಿದ್ದ.
ಹೆಂಡತಿ ಇವನತ್ತ ದೃಷ್ಠಿ ಬೀರಿ "ಈಗ ಕಾಫಿ ಮಾಡಲೋ ಅದವಾ ಹಸಿದಿದ್ದರೆ ಊಟ ಬಡಿಸಲೋ" ಎಂದು ಕೇಳಿದಳು.
ಈತನೆಂದ" ನಿನಗೆ ಕಾಫಿ ಸರಿಯೆಂದಾದರೆ ನನಗೂ ಕೂಡಾ, ಆದರೆ ಮಕ್ಕಳೆಲ್ಲಿ?"
" ನಿನಗೆ ಗೊತ್ತಿಲವಾ? ನಿನ್ನ ಮೆನೇಜರ್ ಬಂದಿದ್ದರು, ೫:೧೫ ಕ್ಕೆ, ಮಕ್ಕಳನ್ನು ಅವರು ಕರೆದೊಯ್ದರು" ಎಂದಳು ಆಶ್ಚರ್ಯದಿಂದ!!
ನಿಜವಾಗಿಯೂ ಏನಾಗಿತ್ತು ಎಂದರೆ.. ಇವನಿಗೆ ಒಪ್ಪಿಗೆ ಕೊಟ್ಟ ಈತನ ಬಾಸ್ ಗಂಟೆ ಐದರಿಂದ ಈತನನ್ನು ಗಮನಿಸುತ್ತಿದ್ದರು, ಈತನ ಗಮನವು ಕೆಲಸದಲ್ಲಿ ಸಂಪೂರ್ಣವಾಗಿ ಕೇಂದ್ರೀಕೃತವಾದುದನ್ನು ಗಮನಿಸಿದವರಿಗೆ, ಈತನ ಮಕ್ಕಳು ಏಕೆ ತಮ್ಮ ಅಧಿಕಾರದಿಂದ ವಂಚಿತರಾಗಬೇಕು ಎನ್ನಿಸಿ ತಾವೇ ಅವರನ್ನು ಕರೆದೊಯ್ಯುವ ನಿರ್ಧಾರವನ್ನು ಅಮಲಿಗೆ ತಂದರು.
ಬಾಸ್ ಇಂತಹ ಕಾರ್ಯಗಳನ್ನು ಮಾಡಲೇ ಬೇಕೆಂದಿಲ್ಲ, ಮಾಡಿದರೆ ಮಾತ್ರ ಅದರ ಫಲಿತಾಂಶ ವರ್ಣನಾತೀತ......
ಇಂತಹಾ ಬಾಸ್ ನ್ನು ಹೊಂದಿದ್ದ " ತುಂಬಾ " ಪ್ರೊಜೆಕ್ಟ್ ಅತೀ ಮಾನಸಿಕ ಒತ್ತಡಗಳ ನಡುವೆಯೂ ಯಶಸ್ವೀ ಶಿಖರವನ್ನೇರಿತು.
ಅಂದ ಹಾಗೆ ಈ ಮೇಲಿನ ಬಾಸ್ ಯಾರಿರಬಹುದು? .
ಅವರೇ ನಮ್ಮ ಪೂರ್ವ ರಾಷ್ಟ್ರಪತಿ ಎ.ಪಿ ಜೆ ಅಬ್ದುಲ್ ಕಲಾಮ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (11)