ಮಳೆ ಬಿಂದು
ತಂತಿ ಮೇಲೆ ಕುಳಿತ ಮಳೆ ಬಿಂದುವಿಗೆ
ಬೂಮಿ ಸೇರುವ ತವಕ ,
ಹನಿ ಹಳ್ಳವಾಗಿ,ಹಳ್ಳ ಕೊಳ್ಳವಾಗಿ
ಮುತ್ತು ಚಿಪ್ಪಿನ ಒಳಗೂ ಅವಿತು
ಸಮುದ್ರದಾಚೆಗಿನ ಊರು ಸೇರುವ
ತವಕ....
ಬಿದ್ದ ಹನಿ ಮುತ್ತಾಗುತ್ತವೆ,
ತುತ್ತಾಗುತ್ತವೆ,ಕಾವ್ಯ ಕನ್ನಿಕೆಕೆಯು
ಆಗುತ್ತವೆ ,
ಇದಾವ ಅದ್ರುಸ್ಟ ಸಿಗದ ಮಳೆ
ಬಿಂದುಗಳು ನನ್ನಂತೆ ಕನಲುತ್ತವೆ,
ಮರುಗುತ್ತವೆ,
ಮತ್ತೆ ಮುತ್ತಾಗುವ ನಿರೀಕ್ಷೆಯಲ್ಲಿ.......
ಪವಿತ್ರ ಪ್ರಶಾಂತ್
ದುಬೈ
ಪ್ರತಿಕ್ರಿಯೆ (12)