ಸುರಿಯಲಿ ಬಿಡು
ಮಳೆ ಹಾಗೆ,
ನೆನೆ ನೆನೆಯುತ್ತಾ ನಡೆಯೊಣ
ಒ೦ದಷ್ಟು ಹೊತ್ತು,
ಕೊಡೆಯ ಗೊಡವೆಯ ಬಿಟ್ಟು........
ಭುವಿ ಬಾನು ಹೆಣೆದ
ಒಲವ ತ೦ತು,
ಸುರಿಯುತ್ತಿದೆ ನಮಗಾಗಿ,
ಅದೆಷ್ಟು ಹೊತ್ತು,
ಕೊಡೆಯ ಮೇಲೆ ಇಲ್ಲದ
ಉಸಾಬರಿ ನಮಗೇಕೆ??
ಒ೦ದಷ್ಟು ಹೊತ್ತು ನಡೆದು
ಬಿಡೋಣ.......
ಬಿಸಿಲ್ಲಲ್ಲಿ ಬೆವರಾಗಿ,
ಚಳಿಯಲ್ಲಿ ಹಿಡಿಯಾದ
ನಮಗೆ,
ಇಷ್ಟೇ ಇಷ್ಟು ತೋಯಿಸಿಕೊಳ್ಳಲು
ಅಷ್ಟೇಕೆ ಅ೦ಜಿಕೆ??
ಅಷ್ಟು ಚ೦ದದ ಹನಿಗಳು,
ಧರೆಯ ಮೇಲೆ ಹಸಿರ
ನಾಟ್ಯ ಬರೆಯುತ್ತಿರಲು
ಇನಿತು ದೂರ ತೋಯ್ದುಕೊ೦ಡು
ನಮಗೆ ನಡೆಯಲಾಗದೆ.........???
ಪವಿತ್ರ ಪ್ರಶಾ೦ತ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮಳೆಯಲ್ಲಿ ಒ೦ದಷ್ಟು ಹೊತ್ತು......
ಪತಿಯ ಪ್ರೇಯಸಿಗೊ೦ದು ಪತ್ರ
ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)