
ನಾನು ಕಂಪ್ಯೂಟರ್ ಗೀಕ್ (ಕೆಲವರು ಗೀಕ್ ಗೆ "ಜೀಕ್" ಎಂದೂ ಹೇಳುತ್ತಾರೆ) ಅಲ್ಲ ಎಂದು ಎಲ್ಲೋ ಒಂದೆಡೆ ಹೇಳಿದ್ದೆ. ಆದರೂ ಕುತೂಹಲ ಕೆಲವೊಮ್ಮೆ ಈ ವಿಸ್ಮಯ ಜಗತ್ತಿನ ಕಡೆ ತೆರಳುತ್ತದೆ. ನಮ್ಮನ್ನು ಆಳಿದ ಇಂಗ್ಲೆಂಡಿನಲ್ಲಿ ಚುನಾವಣೆ. ಬಾಯ್ತೆಗೆದರೆ ಸುಳ್ಳಿನ ಮಾಲೆಯನ್ನೇ ಹೆಣೆಯುವ ಲೇಬರ್ ಪಕ್ಷಕ್ಕೆ ಸರಿಯಾದ "labour" ನೋವನ್ನೇ ಜನ ಉಣಿಸುತ್ತಿದ್ದಾರೆ. ಚುನಾವಣೆಯ ಬಗ್ಗೆ ಓದೋಣ ಎಂದು independent ಪತ್ರಿಕೆ ತೆರೆದಾಗ ಸಿಕ್ಕಿದ್ದು ಈ ಲೇಖನ. ಸ್ವೀಡನ್ನಿನ ೨೫ ವರ್ಷದ ಎರಿಕ್ ಜೋಹಾನ್ಸೋನ್ ಕಂಪ್ಯೂಟರ್ ಇಂಜಿನೀರಿಂಗ್ ವಿದ್ಯಾರ್ಥಿ. ಈತ ಚಿತ್ರಗಳನ್ನ ವಿಸ್ಮಯಕಾರಕ ರೀತಿಯಲ್ಲಿ manipulate ಮಾಡುತ್ತಾನಂತೆ, ನಮ್ಮಲ್ಲಿನ ಅಂಡೇ ಪಿರ್ಕಿ ಪತ್ರಕರ್ತರು ಸುದ್ದಿಯನ್ನು manipulate ಮಾಡುವ ರೀತಿ. ಆದರೆ ಇವನ manipulation ಗೆ ವಿಶ್ವ ಬೆರಗಾಗಿದೆ. ಹೆಚ್ಚಿನ ವಿವರಗಳಿಗೆ ದಯಮಾಡಿ ಈ ವೆಬ್ ತಾಣ ನೋಡಿ, ಗೀಕ್ ಗಳೇ ಅಥವಾ ಜೀಕ್ ಗಳೇ.
ಮೇಲಿನ ಚಿತ್ರದಲ್ಲಿ ಈ ಹುಡುಗ ರಸ್ತೆಯನ್ನು ಹಾಸುತ್ತಿದ್ದಾನೆ ಪಚ್ಚೆ ಪೈರಿನ ನಡುವೆ.
http://www.independent.co.uk/arts-entertainment/art/features/erik-johansson-the-art-of-manipulation-1957888.html
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!