ನಮ್ಮ ದೇಶದಲ್ಲಿ ೪೦ ವರ್ಷದ ಕೆಳಗಿನವರು ೫೭%,
ಆದರೆ ನಮ್ಮ ರಾಜಕೀಯ ಕಣದಲ್ಲಿ ೬೨ ವರ್ಷದ ಮೇಲಿನವರೇ ಹೀರೋಗಳು,
ಈ ವಾನಪ್ರಸ್ಥ ಹೀರೋಗಳ ಆಳ್ವಿಕೆಯಲ್ಲಿ ನಾವು ಸಂತುಷ್ಟ ವಾಗಿರುವೆವೇ?ದೇಶದ ಚುಕ್ಕಾಣಿ ಹಿಡಿದಿರುವ ಇವರ ಕಾರ್ಯ ಕ್ಷಮತ್ವತೆ ನಮಗೆ ತಿಳಿದೇ ಇದೆ, ಹಾಗಿದ್ದರೂ ನಮ್ಮಲ್ಲಿ ಯುವ ರಾಜಕಾರಣಿಗಳ ಕೊರತೆ ಯಾಕಿದೆ?
ನಮ್ಮ ಈಗಿನ ಯುವಕರಿಗೆ ಸಕ್ರಿಯ ರಾಜಕಾರಣದಲ್ಲಿ ಆಸಕ್ತಿಯಿಲ್ಲವೆಂದು ಹೇಳಲಾಗದು, ಶಾಲಾ ಕಾಲೇಜುಗಳಲ್ಲಿ ನಡೆಯುವ ಚುನಾವಣೆಗಳನ್ನು ನೋಡಿದರೆ ಇವು ಯಾವ ನಮ್ಮ ನಿಜವಾದ ಚುನಾವಣೆಗಳಿಗಿಂತ ಯಾವ ರೀತಿಯಿಂದಲೂ ಕಡಿಮೆಯಿಲ್ಲ.ಅಲ್ಲದೇ ಇತ್ತೀಚೆಗಿನ ಜಸ್ಸಿಕಾ ಕೊಲೆ ಪ್ರಕರಣದಂತಹಾ ಸಾಮಾಜಿಕ ಪಿಡುಗು ನಿವಾರಣೆಗಳಲ್ಲಿ ಯುವಕ ಯುವತಿಯರು ಬಾಗಿಯಾದುದನ್ನು ನಾವು ನೋಡುತ್ತಿದ್ದೇವೆ.
ಇನ್ನು ಪ್ರಪಂಚದ, ಮತ್ತು ದೇಶದ ಎಲ್ಲಾ ತರದ ಸಾಮಾಜಿಕ ಪಿಡುಗುಗಳು, ಆರ್ಥಿಕ ಸಂಕಷ್ಟ, ರಾಜಕೀಯ ಸಮಸ್ಯೆ,ಎಲ್ಲವೂ ಇವರಿಗೆ ತಿಳಿದ ವಿಷಯವೇ.ಸರಿಯಾದ ಮಾರ್ಗದರ್ಶನದ ಕೊರತೆ, ರಾಜಕಾರಣದಲ್ಲಿನ ಅನನುಭವ,
ಬೇರೆ ವಿಷಯಗಳಲ್ಲಿನ ಆಕರ್ಷಣೆ ಮುಂತಾದವುಗಳು ಅವರು ರಾಜಕೀಯಕ್ಕೆ ಬರದಿರುವುದಕ್ಕೆ ಕಾರಣವಾಗಿರಬಹುದು.ಇನ್ನು ನಮ್ಮ ಮುಂದಿರುವ ಹಲಕೆಲವು ಯುವನಾಯಕರೆಲ್ಲರಿಗೂ ಬಲವಾದ ರಾಜಕೀಯಮನೆತನದ ಹಿನ್ನೆಲೆಯೂ ಇರುವುದರಿಂದ, ಈ ಹಿನ್ನೆಲೆಯಿಲ್ಲದವರು ಬರುವುದನ್ನು ನಮ್ಮ ವಯೋವೃದ್ಧ ರಾಜಕಾರಣಿಗಳು ವಿರೋದಿಸುವುದೂ ಸ್ವಲ್ಪ ಮಟ್ಟಿಗೆ ಕಾರಣವಿರಬಹುದು.
೬೦-೬೫ ವರ್ಷದ ಮೇಲಿನವರನ್ನು ನಿವೃತ್ತರಾಗಿಸುವ, ರಾಜಕೀಯ ನಾಯಕರಿಗೆ ಕನಿಷ್ಥವಿಧ್ಯಾರ್ಹತೆಯನ್ನು ನಿಗಧಿ ಪಡಿಸುವುದು,ಸಾಮಾಜಿಕ ಪಿಡುಗುಗಳನ್ನು ದೂರವಿರಿಸುವ, ಮತ್ತು ಸಮಾಜದ ಕುಂದುಕೊರತೆಗಳ ಬಗೆಗೆ ಶಿಕ್ಷಣ ನೀಡುವುದರ ಮೂಲಕ, ಯುವನಾಯಕರನ್ನು ದೇಶದ ಮುಂಚೂಣಿ ಹಿಡಿಯಲು ಪ್ರೇರೇಪಿಸಬಹುದು.ಇದರಲ್ಲಿ ದೇಶದ ಮೇಲಿನ ಅಭಿಮಾನವಿರುವ ದೇಶಭಕ್ತ ರಾಜಕೀಯ,ಶಿಕ್ಷಣ,ಮಿಲಿಟರಿ, ಇನ್ನಿತರ ಕ್ಷೇತ್ರಗಳ ಹಿರಿಯ ನಾಯಕರು ಮುಂಚೂಣಿಯಲ್ಲಿದ್ದರೆ ಒಳಿತು. ಭಾರತವನ್ನು ೨೦೨೫ ರ ಪ್ರಪಂಚ ನಾಯಕನ ಪಟ್ಟದಲ್ಲಿ ನೋಡಬೇಕಾದರೆ ಇದು ಈಗಲೇ ಆರಂಭವಾಗುವುದರಿಂದ ಮಾತ್ರ ಸಾಧ್ಯ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!