ಮರೆತೆ ನಾನು ನನ್ನ ಇರವ, ನಿನ್ನ ಮಧುರ ನೆನಪಲೀ
ಹಗುರವಾದೆ ಹತ್ತಿಯಾದೆ, ಗಾಳಿಯಲ್ಲಿ ತೇಲಿದೆ

ತೇಲಿ ತೇಲಿ ತೇಲಿ ತೇಲಿ ನಿನ್ನ ತಲುಪಿ ಮನದಲೇ
ಆಟವಾಡಿ ರಮಿಸಿ ಸುಖಿಸಿ, ಹರುಷ ಪಟ್ಟೆ ಜತೆಯಲೇ

ನಿನ್ನ ಸಂಗ ಸುಖವು ದೊರೆಯೆ ಧನ್ಯ ಭಾವ ಜತೆಯಲೇ
ನೀನು ನಾನು ಒಂದೇ ಎನುವ ಸತ್ಯ ಅದುವೇ ನಭದಲೇ

ಅಲ್ಲಿ ನಿನ್ನ ನಗುವ ಮೊಗವು, ಇಲ್ಲಿ ನಗುವ ಹೂಗಳೂ
ಒಂದೇ ತಾಣ ಒಂದೇ ಜಗವು ಇರವು ಮಾತ್ರ ಬೇರೆಯೂ

ಇರವ ಮರೆತು ಹರುಷ ಕೊಡುವ ಹೂವಿನಂತೆ ಪ್ರೀತಿಯೂ
ಅವಕೆ ನಿನ್ನ ನೆನಪು ಮಧುರ ಮಧುರವೆನಿಸಿ ಮೊರೆವವು