ಮೇಲಿನಿಂದ ಕುಕ್ಕಿದರು

 ಕೆಳಗೊಂದು ಗುಂಡಿ ಒತ್ತಿದರು

ಕೂಗುವಂತಿಲ್ಲ ನುಲಿಯುವಂತಿಲ್ಲ

ನೋವ ತೋಡಿಕೊಳ್ಳುವಂತಿಲ್ಲ!

 

ಕಾಯವು ಅಲ್ಲಾಡಬಾರದು

ಎನಿತು ಭಾರವ ಹೊತ್ತರೂ

ಒಂದೂ ಲೋಹ ಸಡಿಲಾಗಬಾರದು

ಭಾರ ಕೇಂದ್ರ ಬದಲಾಗಬಾರದು!

 

ಎಲ್ಲ ನಿಂತಿರುವುದು ನನ್ನ ತಲೆಯ ಮೇಲೆ

ಸುಖ ಪಯಣ ಸಾಗದು ನಾನಿಲ್ಲದೆಲೆ

ಒಲವಿನ ಮಾತಿಲ್ಲ

ಹೋರುತಿರುವ ಹೊರೆಗೆ ಬೆಲೆಯಿಲ್ಲ!

 

ಸಂಸಾರದ ತಾಕಲಾಟದ ನಡುವೆ

ಬದುಕಿನ ತೆಗ್ಗುದಿಣ್ಣೆಗಳ ಮೇಲೆ

ಮನಸೆಂಬ ವಾಹನವನ್ನು ಸುಖವಾಗಿ

ಸಾಗಿಸುವ ನಾನು

ಶಾಕ್ ಅಬ್ಸಾರ್ಬರು!