ದಂಪತಿ

ಒಲವಿನ ಸತಿಯಾದರದಲ್ಲೇ  ಪತಿ     

                       ಮರೆವನು ಅನ್ಯತಾಭಾವ

ಪ್ರೇಮದ ಪತಿಯಾಸರೆಯಲ್ಲೇ ಸತಿ    

                      ಮೆರೆವಳು ಧನ್ಯತಾಭಾವ

ಸತಿಯನ್ನೇ ಪತಿ ಪತಿಯನ್ನೇ ಸತಿ     

                     ಅರಿತರೆ ಎಲ್ಲಿ ಅಭಾವ

ಸರಿಸಮ ಸತಿಪತಿ ಎಂದೇ ದಂಪತಿ     

                     ಅರಿವರು  ಎಲ್ಲ  ಅಭಾವ