ಎಂದೂ ಯಾರೂ ಬಾರದ ಹಾಂಗೆ
ಬೇಲಿಯ ಕಟ್ಟಿ ಬೆಳೆಸಿದೆವಂದೂ
ನಮ್ಮವರಾರೂ ಬಾರರು ಎಂದು
ಸಮಾಜ ಸಂಸ್ಕೃತಿ ಹಳಿಯುವೆವಿಂದೂ

ನಾವೇ ಕಲಿಸಿದ ಸ್ವಾರ್ಥದ ಪಾಠ
ಬಲಿಯುತ ಬೆಳೆಯುತ ಈ ಪರಿ ಬಂದೂ
ನಾನೂ ನನ್ನದು ಮಾತ್ರವೇ ಕಲಿತು
ನೆಲಜಲ ಸಂಸ್ಕೃತಿ ಮರೆತಿಹೆವಿಂದೂ