ಮಂಜಿನ ಮುಸುಕಿನಿಂದ  ಇಣುಕಿ,

             ಹೊರಬಂದ ಸೂರ್ಯ ಕಿರಣ
              ಜಗವನೆಲ್ಲ ಬೆಳಗಿದ   ಫಳಫಳನೆ.....!

 

   
     ಮನೆಯ ಮಾಡ ಸುತ್ತಲು,
      ಗಿಡಗಳ ಮೇಲೆ,ಹೂವ ಒಳಗಿನ
       ಇಬ್ಬನಿ ಕರಗಿತು ಸರಸರನೆ......



               ಹೊರಗಿನ ಎಲ್ಲವನ್ನು ಪಸರಿಸುವ
                ಬೆಂಬಿಡದೆ ಸ್ಪರ್ಶಿಸುವ,
                  ಒಳಗಿನ ಮನಸನು ತಲುಪುವನೆ......?

 

 

          ಮನದ ಆಳಕೆ ಇಳಿದು
          ಗಾಯವ ಮರು ಬಗೆದು,
          ನೋವನೊಮ್ಮೆ ಕರಗಿಸುವನೆ......??