"ದೇವರು ಪೀಠ ಚೊಕ್ಕು ಮಾಡಕು ಗರಗತ್ತನ ಎಲೆ ಕೊಯ್ಕಂಡು ಬಾರಾ ಅಪಿ" ಅಂತ ಮಲೆನಾಡಿನ ಮನೆಯ ಮಹಿಳೆ ಹೇಳಿದ ಕೂಡಲೆ, ಮನೆ ಮಗ ಹಿತ್ತಲಿಗೆ ಹೋಗಿ ಒಂದಿಷ್ಟು ಗರಗತ್ತನ ಎಲೆ ಕೊಯ್ದು ತಂದು ಗುಡ್ಡೆಹಾಕುತ್ತಾನೆ. ರಾಶಿ ಬಿದ್ದ ಎಲೆಗಳನ್ನು ಕಂಡು ಮನೆ ಒಡತಿ ಫ಼ುಲ್ ಖುಷ್. ಹಾಗಾದರೆ ಮರದ ದೇವರು ಪೀಠ ಚೊಕ್ಕಟವಾಗಿಸುವುದಕ್ಕೂ ಈ ಎಲೆಗೂ ಏನು ಸಂಬಂಧ?, ಗರಗತ್ತ ಎಂದರೆ ಏನು? ಮುಂತಾದವುಗಳನ್ನು ತಿಳಿಯಲು ಮುಂದಿನದನ್ನು ಓದಿ ಮಾಹಿತಿ ಪಡೆಯಬೇಕಿದೆ.
ಮರದ ಪೀಠೋಪಕರಣಗಳಿಗೆಅಂತಿಮಹಂತದಮೆರಗುಕೊಡಲುಮರಳುಕಾಗದಅತ್ಯವಶ್ಯಕ. ಸಾಮಾನ್ಯವಾಗಿಹಾರ್ಡ್ವೇರ್ಶಾಪ್ಗಳಲ್ಲಿಈಸ್ಯಾಂಡ್ಪೇಪರ್ದೊರಕುತ್ತದೆ. ನುಣುಪುಹೆಚ್ಚಲುಮರಳುಕಾಗದಕ್ಕೆತಯಾರಕರುವಿವಿಧರೀತಿಯಸಂಖ್ಯೆಗಳನ್ನುಹಾಗೂಮಾದರಿಗಳನ್ನುಕೊಟ್ಟಿದ್ದಾರೆ. ಮರಗೆಲಸದವರುತಮ್ಮಕೆಲಸಕ್ಕನುಗುಣವಾಗಿಅದನ್ನುಬಳಸುತ್ತಾರೆ. ಇದುಮನುಷ್ಯರುತಯಾರುಮಾಡಿದಮರಳುಕಾಗದದಕತೆಯಾಯಿತು. ಆದರೆಪ್ರಕೃತಿಮನುಷ್ಯನಿಗಿಂತಚಂದವಾಗಿಮರವೊಂದರಎಲೆಯಲ್ಲಿಈವ್ಯವಸ್ಥೆಯನ್ನುಅಭೂತಪೂರ್ವವಾಗಿಸೃಷ್ಟಿಸಿದೆ. ಆಮರದಹೆಸರು "ಗರಗತ್ತ".
ಮಲೆನಾಡಿನ ಹಳ್ಳಿಮನೆಗಳಲ್ಲಿಲಾಗಾಯ್ತಿನಿಂದಲೂಈಗರಗತ್ತದಮರದಎಲೆಗಳನ್ನುಮರದಪೀಠೋಪಕರಣಗಳನ್ನುನುಣುಪುಗೊಳಿಸಿಪಳಪಳಹೊಳೆಯುವಂತಾಗಲುಬಳಸುತ್ತಾಬಂದಿದ್ದಾರೆ. ಗರಗತ್ತನಎಲೆಯಹಿಂಬಾಗಜೀರೋನಂಬರ್ಸ್ಯಾಂಡ್ಪೇಪರ್ಕೆಲಸಮಾಡಿದಂತೆಮಾಡುವುದರಿಂದಹಾಗೂಗರಗಸದಂತೆಕೆಲಸಮಾಡುವುದರಿಂದ "ಗರಗತ್ತ" ಎಂಬಹೆಸರುಬಂದಿದೆ . ಸಣ್ಣಪ್ರಮಾಣದನೊರೆಯೂಇದರಿಂದಉಕ್ಕುತ್ತದೆ, ಹಾಗಾಗಿಸೋಪಿನಪುಡಿಯಅಗತ್ಯಇರುವುದಿಲ್ಲ. ಮನೆಗೊಂದುಮರಇದ್ದರೆಕಾಸುಖರ್ಚಿಲ್ಲದೆಮರಳುಕಾಗದಸಿಗುತ್ತದೆ. ಮರದಅಷ್ಟೂಸಾಮಗ್ರಿಗಳನ್ನುಹೊಳಪುಬರುವಂತಾಗಲುಇಂದಿಗೂಬಳಸುವುದುಈಗರಗತ್ತನಎಲೆಗಳನ್ನೇಎಂದರೆಆಶ್ಚರ್ಯವಾಗುತ್ತದೆ. ಪ್ರಕೃತಿಯೇನೋಅದ್ಬುತವನ್ನುನೀಡಿದೆಆದರೆಅತಿಯಾಸೆಗೆಬೀಳದೆಉಳಿಸಿಕೊಂಡುಹೋಗುವುದುಪ್ರಿಯರಕೆಲಸವಾಗಬೇಕು.
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)
ಪ್ರತಿಕ್ರಿಯೆ (7)