ಓ ಕಾಲವೇ
ಹೀಗೇಕೆ ತಡಮಾಡಿ ನನ್ನ ನೋಯಿಸುತ್ತಿರುವೆ
ಇನ್ನೆಷ್ಟು ದಿನ ಉಳಿದಿದೆ ನಿನ್ನ ಕಾಲ ಚಕ್ರದಲ್ಲಿ
ಆಷಾಡ ಮಾಸ ಬರಲು?
ಆಕಾಶದಲ್ಲಾಗಲೇ ಚಲಿಸುತ್ತಿವೆ ಕರಿ ಮೋಡಗಳು
ಬರುತ್ತದೆಂದರೂ ಬರುತ್ತಿಲ್ಲ ಮಳೆ
ಈ ಕಡೆ ಮಳೆಯೂ ಇಲ್ಲದೆ, ಬಿಸಿಲು ಇಲ್ಲದೆ
ತಂಗಾಳಿಯ ಜೊತೆ ಆಡುತ್ತಿರುವೆ ಕಣ್ಣಾಮುಚ್ಚಾಲೆ ಆಟ
ಹೀಗೇಕೆ ತಡ ಮಾಡಿ ಕಾಡುತ್ತಿರುವೆ ನನ್ನ
ನೀನು ಬಂದರೆ ಬೇಗ
ಯಾರೂ ಬರುವುದಿಲ್ಲ ನನ್ನ ಹುಡುಗಿಯನ್ನು ನೋಡಲೆಂದು,
ಆಗ ಇರಬಹುದು ನಾನು ಒಂದು ತಿಂಗಳ ಕಾಲ
ಯಾವುದೇ ಯೋಚನೆ ಇಲ್ಲದೆ ನೆಮ್ಮದಿಯಾಗಿ..
ಪ್ರತಿಕ್ರಿಯೆ (1)